ಪ್ರಾಚೀನ ಆಯುರ್ವೇದ ಈಗಲೂ ಪರಿಣಾಮಕಾರಿ ,, ಕರ್ನಾಟಕ ರಾಜ್ಯ ಸರ್ಕಾರದ ವಿಶೇಷ ದೆಹಲಿ ಪ್ರತಿನಿಧಿ : ಶಂಕರಗೌಡ ಪಾಟೀಲ್

0

ಬೆಳಗಾವಿ : ಸಂತ ಶ್ರೀ ಜಲಾರಾಮ ಫೌಂಡೇಷನ್ ವತಿಯಿಂದ ವೀರಬಾಯಿ ಮಾ ಪುಣ್ಯತಿಥಿ ನಿಮಿತ್ತ ಬೆಳಗಾವಿ ನಗರದಲ್ಲಿ 3 ಸಾವಿರ ಪ್ಯಾಕೆಟ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧ ವಿತರಿಸಲಾಯಿತು.

ಬೆಳಗಾವಿ ನಗರದ ಖಡೇಬಜಾರ ಮಾರುತಿ ಮಂದಿರ ದಲ್ಲಿ ಮತ್ತು ನರಗುಂದಕರ ಭಾವೆ ಚೌಕ್ ದಲ್ಲಿ ಬುಧವಾರ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಶ್ರೀ ಶಂಕರಗೌಡ ಪಾಟೀಲ. ಆಯುರ್ವೇದ ಔಷಧದ ಪ್ಯಾಕೆಟ್ಗಳನ್ನು ವಿತರಿಸಿದರು.

ಈ ವೇಳೆ ಖಡೇ ಬಜಾರ್ ವ್ಯಾಪಾರಿ ಸಂಘದಿಂದ ಅಧ್ಯಕ್ಷ ಸುನೀಲ ನಾಯಕ, ಸುರೇಶ ಪೋರವಾಲ್ ಅವರು ಶಂಕರಗೌಡ ಪಾಟೀಲ ಅವರನ್ನು ಸನ್ಮಾನಿಸಿದರು.ಈ ವೇಳೆ ಸಂತ ಜಲಾರಾಮ್ ಫೌಂಡೇಷನ್ ಅಧ್ಯಕ್ಷ ಕನ್ನೂಭಾಯಿ ಠಕ್ಕರ್ ಮಾತನಾಡಿ, ಕೊರೋನಾ ವೇಳೆ ಸಂಸ್ಥೆಯಿಂದ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು.

ಇಂದು ವೀರಭಾಯಿ ಪುಣ್ಯತಿಥಿ ನಿಮಿತ್ತ ಆಯುರ್ವೇದ ಔಷಧಗಳನ್ನು ವಿತರಿಸುತ್ತಿದ್ದೇವೆ ಎಂದರು.ಈ ವೇಳೆ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಮಾತನಾಡಿ, ಕೊರೋನಾ ಕಡಿಮೆಯಾದರೂ ಮುಂಜಾಗ್ರತೆ ಅಗತ್ಯವಾಗಿದೆ. ಸುರಕ್ಷತೆಗೆ ಆದ್ಯತೆ ನೀಡಬೇಕು.

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪ್ರಾಚೀನ ಆರೋಗ್ಯ ವಿಜ್ಞಾನವಾದ ಆಯುರ್ವೇದ ಈಗಲೂ ಪರಿಣಾಮಕಾರಿಯಾಗಿದೆ. ಈ ಸರಳ ಔಷಧ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಈ ವೇಳೆ ಭಗವಾನ್‍ದಾಸ್ ಕಪಾಡಿಯಾ, ಕೃಷ್ಣ ಭಟ್, ವಿಜಯ ಪೋರವಾಲ್, ಮುಖೇಶ ಖೋಡಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು