ತಲೆ ಮೇಲೆ ಚಪ್ಪಲಿಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

0

ಬೆಳಗಾವಿ, ಡಿ. 12- ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಮುಷ್ಕರ 2ನೇ ದಿನವಾದ ಶನಿವಾರವೂ ಮುಂದುವರಿದಿದೆ.

ಕೆಲಸದಿಂದ ದೂರ ಉಳಿದು ಹೋರಾಟ ನಡೆಸುತ್ತಿರುವ ನೌಕರರು , ತಲೆ ಮೇಲೆ ಚಪ್ಪಲಿಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿಲ್ದಾಣದಲ್ಲೇ ಉಪಾಹಾರ ಸಿದ್ಧಪಡಿಸಲು ತಯಾರಿ ನಡೆಸಿದ್ದಾರೆ. ಮುಷ್ಕರದ ಬಗ್ಗೆ ಮಾಹಿತಿ ಇರುವುದರಿಂದ ಹೆಚ್ಚಿನ ಪ್ರಯಾಣಿಕರು ಬಸ್ ನಿಲ್ದಾಣದತ್ತ ಬರುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಹಿಂಪಡೆಯು ವುದಿಲ್ಲ ಎಂದು ನೌಕರರು ಪಟ್ಟು‌ ಹಿಡಿದಿದ್ದಾರೆ.

ಇಲ್ಲಿಯವರೆಗೆ ಸಾರಿಗೆ ಸಚಿವರಾಗಲಿ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳಾಗಲಿ ಬೆಂಗಳುರು ಮುಖಂಡರನ್ನು ಭೇಟಿ ಮಾಡಿ ಸೌಜನ್ಯಕ್ಕೆ ಮಾತುಕತೆ ನಡೆಸಿಲ್ಲ.. ನಮ್ಮ ಹೋರಾಟ ಮುಂದುವರೆಯಲಿದೆ-

ರಾಜು ಪಣ್ಯಗೊಳ, ಎಸ್ಸಿ ಎಸ್ಟಿ ನೌಕರರ ಸಂಘದ ಪ್ರ. ಕಾರ್ಯದರ್ಶಿ..