ಬೆಳಗಾವಿ, ಡಿ. 12- ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ನಿಲ್ಧಾಣದಲ್ಲಿ ಶುಕ್ರವಾರ ನಡೆದ ಮುಷ್ಕರದಲ್ಲಿ ಪಾಲ್ಗೊಂಡು ಮನೆಗೆ ತೆರಳಿದ್ದ ಬಸ್ ಚಾಲಕ ಹೃದಯಾಘಾತದಿಂದ ಶುಕ್ರವಾರ ತಡ ರಾತ್ರಿ ಸಾವ ನ್ನಪ್ಪಿದ್ದಾರೆ..
ವಡಗಾವಿಯ ನಿವಾಸಿ ದತ್ತ ಮಂಡೋಳ್ಕರ್ (58) ಮೃತ ಚಾಲಕ ಆಗಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆ ಎದೆ ನೋವು ಕಾಣಿಸಿ ಕೊಂಡಿದ್ದರಿಂದ ಅವರು ಮನೆಗೆ ಹೋಗಿದ್ದರು ಎಂದು ತಿಳಿದು ಬಂದಿದೆ.
ಇಲ್ಲಿನ 2ನೇ ಘಟಕದಲ್ಲಿ ಚಾಲಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ನಗರ ಸಾರಿಗೆ ವಿಭಾಗದಲ್ಲಿ ಇದ್ದರು. ಸಿಬ್ಬಂದಿ ಮತ್ತು ಕುಟುಂಬ ವಿರಾಗದವರು ಇಂದು ಅಂತ್ಯ ಸಂಸ್ಕಾರ ನೆರವೇರಿಸಿದರು..
Recover your password.
A password will be e-mailed to you.