ಶಾಲಾ ಶಿಕ್ಷಕರ ಸಂಘದ ಬೆಳಗಾವಿ ತಾಲೂಕಿನ ಪ್ರತಿನಿಧಿಗಳ ಮುವತ್ತು ಸ್ಥಾನಗಳ ಆಯ್ಕೆಗೆ ಚುನಾವಣೆ ಜರುಗಲಿದ್ದು.

0

ಬೆಳಗಾವಿ   ; ಬೆಳಗಾವಿ ತಾಲೂಕಿನ ಶಿಕ್ಷಕರ ಪ್ರತಿನಿಧಿ ಆಯ್ಕೆ   ಗುರು ಸ್ಪಂದನ ಪ್ಯಾನೆಲ್ ಆಯ್ಕೆ ಖಚಿತ  ಇದೇ ಬರುವ ಮಂಗಳವಾರ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ತಾಲೂಕಿನ ಪ್ರತಿನಿಧಿಗಳ ಮುವತ್ತು ಸ್ಥಾನಗಳ ಆಯ್ಕೆಗೆ ಚುನಾವಣೆ ಜರುಗಲಿದ್ದು.

ತಾಲೂಕಿನ ಸವ೯ ಪ್ರಾಥಮಿಕ ಶಾಲಾ ಶಿಕ್ಷಕ -ಶಿಕ್ಷಕಿಯರು ಮತದಾನ ಹಕ್ಕು ಹೊಂದಿದ್ದು, ಚುನಾವಣೆಯಲ್ಲಿ ಗುರು ಸ್ಪಂದನ ಪ್ಯಾನೆಲ್ ಹಾಗೂ ಪ್ರಗತಿ ಪರ ಪ್ಯಾನೆಲ್ಎಂಬ ಎರಡು ಗುಂಪುಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದು,ತಾಲೂಕಿನ ವಿವಿಧ ಗ್ರಾಮಗಳಲ್ಲಿಯ ಶಿಕ್ಷಕರು ಹಾಗೂ ಶಿಕ್ಷಕಿಯರು ಸದ್ಯದ ಆಡಳಿತ ಮಂಡಳಿಯ ಆರು ವಷ೯ಗಳ ಕಾಯ೯ ಚಟುವಟಿಕೆಗಳನ್ನು ಗಮನಿಸಿದ್ದು ಅವರ ಅಭಿಪ್ರಾಯ ಕೇಳಿದರೆ ಶಿಕ್ಷಕರ ಸಂಘದ ಕಾಯ೯ಚಟುವಟಿಕೇ ಕುರಿತು ಅತೃಪ್ತಿಯನ್ನು ಬಹಿರಂಗ ವಾಗಿಯೇ ವ್ಯಕ್ತಪಡಿಸುತ್ತಿರುವರು,

ಜೊತೆ ಜೊತೆಗೆ ಶಿಕ್ಷಕರ ಸೊಸೈಟಿ ಉತ್ತಮ ಗುಣಮಟ್ಟದ ನಿವ೯ಹಣೇಯಲ್ಲಿ ಸವ೯ರ ಬೆಂಬಲ ಗಳಿಸಿರುವ ಪದಾಧಿಕಾರಿಗಳು ಆಡಳಿತ ಮಂಡಳಿ ಬೆಂಬಲವು ಇರುವ ಗುರು ಸ್ಪಂದನ ಪ್ಯಾನೆಲ್ ಚುನಾವಣೆಯಲ್ಲಿಯ ಮುವತ್ತು ಸ್ಥಾನಗಳನ್ನು ಗೆಲ್ಲುವುದು ನಿಶ್ಚತವಾಗಿದೇ ಎಂದು ಹೇಳಬಹುದು ಗುರು ಸ್ಪಂದನ ಶಿಕ್ಷಕರ ಬಳಗದ ಜಯಭೇರಿಗೆ ಕಾರಣ ಗಳನ್ನು ನೋಡಬೇಕಾದರೆ

ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ
ಬಹಳಷ್ಟು ಅಭ್ಯರ್ಥಿಗಳು ಕ್ರಿಯಾಶೀಲರು ಹಾಗೂ ಇಲಾಖೆಯ ನಿಯಮ ಬಲ್ಲ ಮತ್ತು ಹೃದಯ ವಂತ ಶಿಕ್ಷಕರಾಗಿರುವರು, ಕ್ಲಸ್ಟರ್ ಮಟ್ಟದಲ್ಲಿ ಪ್ರತಿ ತಿಂಗಳಿಗೊಮ್ಮೆ “ಶಿಕ್ಷಕರ ಅದಾಲತ್” ನಡೆಸುವ ಮನೋಭಾವ ಹೊಂದಿರುವವರು ಆಗಿದ್ದಾರೆ ,

ಜೊತೆ ಜೊತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಶಿಕ್ಷಕರಿಗೆ “ಶಿಕ್ಷಣ ಕಾರ್ಯಾಗಾರ” ಮಾಡಬೇಕೆಂದು ಬಯಸುವವರಾಗಿರುವರು , ಯಾವುದೇ ಹಣಕಾಸಿನ ವ್ಯವಹಾರ ನಡೆಸದೇ ,10,15,20,25,30,ವರ್ಷಗಳ ವಿಳಂಬರಹಿತ ವೇತನಬಡ್ತಿ ಮಂಜೂರ ಮಾಡಿಸುವರು ಆಗಿರುವರು ,ರಜಾ ಅವಧಿಯಲ್ಲಿ ಕಾರ್ಯನಿರತ ದಿನಗಳ ಗಳಿಕೆ ರಜೆ ಗಳನ್ನುಮಂಜೂರಿ ಮಾಡಿಸಬೇಕೆನ್ನುವ ಹಂಬಲದಿಂದ ಕಾಯ೯ಮಾಡಿಸುವ ಪಡೆ ಹೊಂದಿರುವರು ಶಿಕ್ಷಕರಿಗೆ ಪದೋನ್ನತಿಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಮಾಡಿಸುವ ಮನೋಭಾವವಿರುವವರು ,

ಜಿಲ್ಲೆ,ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯಕ್ರಮ ಮತ್ತೂ ಸಮ್ಮೇಳಗಳಿಗೆ ಹೋಗಲು ಸೌಲಭ್ಯಗಳನ್ನು ಒದಗಿಸುವವರು , ಪ್ರಾಮಾಣಿಕವಾಗಿ ದಶಕಗಳ ಕಾಲ ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ /ಶಿಕ್ಷಕಿಯರಿಗೆ ವಿಳಂಬರಹಿತ ನಿವೃತಿ ವೇತನ ಸಿಗಬೇಕೆನ್ನುವ ಹಾಗೂ ಆ ನಿಟ್ಟಿನಲ್ಲಿ ಕೆಲಸ ಮಾಡುವ ಸಂಕಲ್ಪ ಗುರು ಸ್ಪಂದನ ಈ ಪ್ಯಾನೆಲ್ ಗಿದ್ದು ವೈದ್ಯಕೀಯ ಬಿಲ್ಲ ತ್ವರಿತವಾಗಿ ಸಿಗಬೇಕು ,ಪ್ರತಿ ವರ್ಷ ಶಿಕ್ಷಕರಿಗೆ ಆದಾಯ ತೆರಿಗೆ ಫಾರ್ಮ ಉಚಿತವಾಗಿ ತುಂಬಿ ಕೊಡುವುದು,

ಹೊಸ ಪಿಂಚಣಿ ಯೋಜನೆ (ಓSP) ಪದ್ಧತಿ ರದ್ದತಿಗಾಗಿ ಸಹಕರಿಸುವುದು ಪ್ರತಿ ತಿಂಗಳು ವೇತನ ಪ್ರತಿ ಶಿಕ್ಷಕರಿಗೆ ಮುಟ್ಟಿಸುವುದು ,ಶಿಕ್ಷಕರ ಕುಟುಂಬ ಸದಸ್ಯರ ಸಭೆ ಸಮಾರಂಭಗಳಿಗೆ ಗುರುಭವನ ನಿರ್ಮಾಣ ಹಾಗೂ ಶಿಕ್ಷಕರ ಸ್ನೇಹಿ ವರ್ಗಾವಣೆ ನೀತಿಗಳು ಜಾರಿಯಾಗಬೇಕು,ಎನ್ನುವ ಹಂಬಲ ಈ ಪ್ಯಾನೆಲ್ ಹೊಂದಿರುವುದು,

ಈ ಹಿಂದೆ ಹಾಗೂ ಶಿಕ್ಷಕರ ಸೊಸೈಟಿ ಆಡಳಿತ ಮಂಡಳಿಯಲ್ಲಿ ಕೆಲಸ ಕಾರ್ಯಗಳಲ್ಲಿ ಮಾಡಿ ತೋರಿಸಿದ್ದು ಇವರ ಬಗ್ಗೆ ಶಿಕ್ಷಕರ ಒಲವು ಮೂಡಲು ಕಾರಣ ರಾಗಿದ್ದು ,ಸ್ವಾಭಿಮಾನಿ,ಲಂಚರಹಿತ ಮತ್ತು ಮಾನವೀಯ ಮೌಲ್ಯವುಳ್ಳ ಶಿಕ್ಷಕ ಪ್ರತಿನಿಧಿಗಳು ಆಯ್ಕೆಯು ಆಗಬೇಕು ಎನ್ನುವ ಮನೋಭಾವ ಈ ಸಲ ಗುರು ಸ್ಪಂದನ ಪ್ಯಾನೆಲ್ ಆಯ್ಕೆಯಾಗಲು ಸಹಕಾರಿಯಾಗಿದೆ

ಬೆಳಗಾವಿ ತಾಲೂಕಿನ ಪ್ರತಿನಿಧಿಗಳ ಇಪ್ಪತ್ತು ಸಾಮಾನ್ಯ ಸ್ಥಾನಗಳಿಗೆ ಆನಂದಗೌಡ ಕಾದ್ರೋಳ್ಳಿ, ಅನ್ವರ್ ಲಂಗೋಟಿ, ಅಶೋಕ್ ಅರವಳ್ಳಿ, ಬಸಪ್ಪ(ಬಸವರಾಜ) ಸುಣಗಾರ,ಬಸವರಾಜ ಕಂಬಾರ, ಬೆನಕಟ್ಟಿ ರವೀಂದ್ರ, ಕೇದಾರಿ ಗುಂಜಿಕರ, ಕಿರಣ್ ಕರಂಬಳಕರ, ಎಮ್ ಬಿ ಬಾಗವಾನ, ನಾಮದೇವ ಕಾನಶಿಡೇ, ಪಾಟೀಲ ಈಶ್ವರ, ಪ್ರಲ್ಹಾದ ದಳವಿ,ಆರ್ ಕೆ ಗುರವ, ಎಸ್ ಎಮ್ ಗಾಣಗಿ, ಎಸ್ ಎನ್ ಕೌತಗಾರ, ಸಂಪತ್ತ ಸುಖಯೇ,ಸತೀಶ್ ಕದಮ, ಶೇಖರ್ ಕರಂಬಳಕರ, ಸುನೀಲ್ ಬಾಗೇವಾಡಿ, ವೀರಪ್ಪ ಮುಳ್ಳೂರ, ಹಾಗೂ ಮಹಿಳಾ ಹತ್ತು ಸ್ಥಾನಗಳಿಗೆ ಅನುರಾಧಾ ತಾರೀಹಾಳಕರ, ಚಂಗುನಾ ದೇಸಾಯಿ,

ಗುಲನಾರಬೇಗಂ ಶಬಾಸಖಾನ, ಜಯಶ್ರೀ ಕೇರಿಮಠ,ಜಯಶ್ರೀ ಕೋಳೇಕರ,ಕಿರಣ ಗಾಯಕವಾಡ, ರಾಜಶ್ರೀ ಅಕ್ಕಿ, ಸೈರಾಬಾನು ಮುಗಟ,ಸುಶೀಲಾ ರಜಪೂತ,ವನಿತಾ ಸಾಯನೇಕರ ಸ್ಪಧಿ೯ಸಿದ್ದು ಇವರು ತಮ್ಮ ತಮ್ಮ ಶಾಲೆಯ ಪರಿಸರದಲ್ಲಿ ಉತ್ತಮ ಗುಣಮಟ್ಟದ ಕೆಲಸ ಕಾಯ೯ ಚಟುವಟಿಕೆಗಳಲ್ಲಿ ಉತ್ತಮ ಹೆಸರು ಗಳಿಸಿರುವರು .

ಹೀಗಾಗಿ ಮಂಗಳವಾರ ದಿನಾಂಕ ೧೫-೧೨-೨೦೨೦ರಂದು ನಡೆಯುವ ಬೆಳಗಾವಿ ತಾಲೂಕಿನ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಖಚಿತವಾಗಿಯೂ ಜಯಗಳಿಸುವರು ಎಂದು ನಮ್ಮ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಿದೆ