ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪೋರ್ಟ್ಸ್ ಇಂಡೋರ್ ಸ್ಟೇಡಿಯಂ ನಿರ್ಮಿಸಲು ಶಾಸಕ ಅಭಯ ಪಾಟೀಲ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದಾರೆ.

0

ಬೆಳಗಾವಿ-ಮುಂದಿನ ದಿನಗಳಲ್ಲಿ ಬೆಳಗಾವಿ ನಗರ ಕ್ರೀಡಾಲೋಕದಲ್ಲಿಯೂ ರಾಷ್ಟ್ರ ಮಟ್ಟದಲ್ಲಿ ಎಲ್ಲರ ಗಮನ ಸೆಳೆಯುವ ಕಾಲ ಕೂಡಿ ಬಂದಿದೆ,ಯಾಕಂದ್ರೆ ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪೋರ್ಟ್ಸ್ ಇಂಡೋರ್ ಸ್ಟೇಡಿಯಂ ನಿರ್ಮಿಸಲು ಶಾಸಕ ಅಭಯ ಪಾಟೀಲ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದಾರೆ.

ಬೆಳಗಾವಿ ಪಕ್ಕದ ಯಳ್ಳೂರು ಗ್ರಾಮದ ಹದ್ದಿಯಲ್ಲಿರುವ 40 ಎಕರೆ ಸರ್ಕಾರಿ ಜಾಗೆಯಲ್ಲಿ,ಮಹಾರಾಷ್ಟ್ರ ದ ಪೂನೆಯ ಬಾಲೆವಾಡಿ ,ಯಲ್ಲಿರುವ ಅಂತರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣದ ಮಾದರಿಯಲ್ಲಿ ಅತ್ಯಂತ ಸುಧಾರಿತ ಶೈಲಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಸಂಕಲ್ಪ ಮಾಡಿರುವ ಶಾಸಕ ಅಭಯ ಪಾಟಲ ಇಂದು ಕ್ರೀಡಾ ಇಲಾಖೆಯ ಆಯುಕ್ತ ಶ್ರೀನಿವಾಸ ಜೊತೆಗೆ ಯಳ್ಳೂರು ಗ್ರಾಮದಲ್ಲಿರುವ ಸರ್ಕಾರಿ ಜಾಗೆಯನ್ನು ಪರಶೀಲಿಸಿದರು.

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಅಭಯ ಪಾಟೀಲ,ಬೆಳಗಾವಿ ನಗರ ಫೌಂಡ್ರಿ ಉದ್ಯಮ,ಹಾಗು ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಂತೆ ,ಕ್ರೀಡಾರಂಗದಲ್ಲೂ ಬೆಳಗಾವಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಸಂಕಲ್ಪ ಮಾಡಿದ್ದೇನೆ,ಬೆಳಗಾವಿ ಪಕ್ಕದ ಯಳ್ಳೂರ ಗ್ರಾಮದಲ್ಲಿ,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಸರ್ಕಾರ ಮುಂದಾಗಿದೆ.ಈ ಕುರಿತು ಸರ್ಕಾರದ ಮಟ್ಟದಲ್ಲಿ ಹಲವಾರು ಬಾರಿ ಚರ್ಚೆ ಮಾಡಿ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ಅಭಯ ಪಾಟೀಲ ಹೇಳಿದರು

ಉತ್ತರ ಕರ್ನಾಟಕ ಭಾಗದಲ್ಲಿ ಬಹಳಷ್ಡು ಜನ ಅಥ್ಲೆಟಿಕ್ ,ಕ್ರೀಡಾಪಟುಗಳಿದ್ದು,ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾದರೆ,ಕ್ರಿಕೆಟ್ ಹೊರತುಪಡಿಸಿ,ಟೆನಿಸ್ ಪುಟ್ ಬಾಲ್, ವ್ಹಾಲಿಬಾಲ್,ಜಿಮ್ನ್ಯಾಸ್ಟಿಕ್ ಸೇರಿದಂತೆ ಎಲ್ಲ ಕ್ರೀಡೆಗಳನ್ನು ಒಂದೇ ಸೂರಿನ ಕೆಳಗೆ ಅಡುವದರ ಜೊತೆಗೆ ತರಬೇತಿ ಮತ್ತು ಮಾರ್ಗದರ್ಶನ ಸಿಗಲಿದೆ ಇದರಿಂದ ಬೆಳಗಾವಿ ಆರ್ಥಿಕವಾಗಿಯೂ ಬೆಳೆಯಲಿದೆ ಎಂದು ಶಾಸಕ ಅಭಯ ಪಾಟೀಲ ವಿಶ್ವಾಸ ವ್ಯೆಕ್ತಪಡಿಸಿದರು.

ದಕ್ಷಿಣ ಭಾರದಲ್ಲೇ ಇಂತಹ ಒಳಾಂಗಣ ಕ್ರೀಡಾಂಗಣ ಇಲ್ಲ,ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಆಗುತ್ತಿರುವದು ,ಸರ್ಕಾರ ಅದಕ್ಕೆ ಸಮ್ಮತಿ ಸೂಚಿಸಿರುವದು ಹೆಮ್ಮೆಯ ಸಂಗತಿಯಾಗಿದೆ.ಎಂದು ಅಭಯ ಪಾಟೀಲ ಸಂತಸ ವ್ಯೆಕ್ತಪಡಿಸಿದ್ದಾರೆ.