ಶಿವಗಿರಿ ಕೋ-ಆಪ್ ಕ್ರೆಡಿಟ್ ಸೊಸೈಟಿ 21 ನೇ ವಾರ್ಷಿಕ ಮಹಾಸಭೆಯಲ್ಲಿ ಹೇಳಿಕೆ ಸೊಸೈಟಿ ಏಳಿಗೆಗೆ ಗ್ರಾಹಕರ ಸಹಕಾರ ಅಗತ್ಯ:ಡಾ.ಸಬ್ನಿಸ್

0

ಬೆಳಗಾವಿ: ಗ್ರಾಹಕರ, ಠೇವಣಿದಾರರ ವಿಶ್ವಾಸಗಳಿಸಿಕೊಂಡು ಈ ಕ್ಷೇತ್ರದಲ್ಲಿ ದಾಪುಗಾಲು ಇಟ್ಟಿರುವ ಶಿವಗಿರಿ ಸೊಸೈಟಿ ಕಾರ್ಯ ಮೆಚ್ಚುವಂತದು, ಸೊಸೈಟಿ ಹಿತದೃಷ್ಟಿಗಾಗಿ ಗ್ರಾಹಕರು ಸಕಾಲಕ್ಕೆ ಸಾಲವನ್ನು ಮರುಪಾತಿಸಲು ಸಹರಿಸಬೇಕೆಂದು ಸಂಘದ ಡಾ. ನೇತ್ರಾವತಿ ಸಬ್ನಿಸ್ ಹೇಳಿದರು.

ಇಲ್ಲಿನ ಗಣೇಶ ಛೇಂಬರ್‍ನ ಶಿವಗಿರಿ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಸೋಮವಾರ 13 ರಂದು ಸಂಘದ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,

ಸಂಕಷ್ಟ ದಿನಗಳಲ್ಲಿ ಬ್ಯಾಂಕ್‍ನಿಂದ ಸಾಲ ಪಡೆದ ಅದೆಷ್ಟು ಗ್ರಾಹಕರು ಮರುಪಾವತಿಸಲು ಹಿಂದೇಟು ಹಾಕಿರುವ ಉದಾಹರಣೆ ಇದೆ, ಗ್ರಾಹಕರು ಬ್ಯಾಂಕ್‍ನಿಂದ ಕಾಲವಕಾಶ ಪಡೆದು ಆದಷ್ಟೂ ಶೀಘ್ರ ಹಣವನ್ನು ಪಾವತಿಸಿದರೆ ಸೊಸೈಟಿಗಳು ಏಳಿಗೆ ಕಾಣುತ್ತವೆ ಎಂದರು.

ನಿರ್ದೇಶಕರಾದ ಗಂಗಾಧರ ಎಮ್ ರವರು ಸಂಘ ನಡೆದು ಬಂದ ಹಾದಿ ಹಾಗು ಉದ್ದೇಶದ ಕುರಿತು ಮಾತನಾಡಿದರು.
ಸಂಘದ ಮುಖ್ಯ ವ್ಯವಸ್ಥಾಪಕ ಸೋಮನಾಥ ಎಸ್. ಕಡಕೋಳರವರು 2019-20 ನೇ ಸಾಲಿನ ಲೆಕ್ಕಪತ್ರ ವರದಿಯನ್ನು ಮಂಡಿಸಿದರು. ಈ ವೇಳೆ ಪ್ರತಿಭಾವಂತ ವಿಧ್ಯಾರ್ಥಿಗಳನ್ನು, ಹಾಗು ಸಂಘದ ಅತ್ಯುತ್ತಮ ಗ್ರಾಹಕರ ಹಾಗೂ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರನ್ನು ಸತ್ಕರಿಸಲಾಯಿತು.

ಉಪಾಧ್ಯಕ್ಷರಾದ ಸುನೀಲ್ ಪೂಜಾರಿ ಮಾತನಾಡಿ ಅವರು, ಸಂಘವು ಕೇವಲ ಲಾಭ ಗಳಿಕೆಯ ಉದ್ದೇಶ ಅಲ್ಲದೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಇದು ಹೀಗೆ ಮುಂದುವರಿದು ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಡೆಯುವಂತಾಗಲಿ ಎಂದರು.

ಸಂಘದ ಅಧ್ಯಕ್ಷ ಸುಜನ್ ಕುಮಾರ್ ರವರು ಸಂಘದ ಏಳ್ಗೆಯಲ್ಲಿ ಸದಸ್ಯರ ಪಾತ್ರ ಪ್ರಮುಖವಾಗಿದ್ದು ಎಲ್ಲಾ ಸದಸ್ಯರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕರಿಸಬೇಕು ಹಾಗೆಯೇ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗು ಸಿಬ್ಬಂದಿವರ್ಗದವರ ಸಹಕಾರದಿಂದ ಸಂಘವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲರ ಸಹಕಾರದಿಂದ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ ಎಂದರು.

ಸತ್ಕಾರವನ್ನು ಸ್ವೀಕರಿಸಿದ ವಿದ್ಯಾರ್ಥಿಗಳ ಪೆÇೀಷಕರು ಹಾಗು ಅತ್ಯುತ್ತಮ ಗ್ರಾಹಕರು ಸಭೆಯಲ್ಲಿ ಮಾತನಾಡಿ ಸಂಘದ ಸಾಮಜಿಕ ಕಾರ್ಯವನ್ನು ಹೊಗಳಿ ಈ ಸಂಘದಿಂದ ಇನ್ನೂ ಹೆಚ್ಚು ಇಂತಹ ಸಮಾಜಮುಖಿ ಕಾರ್ಯಗಳು ನಡೆಯಲಿ ಹೆಚ್ಚಿನ ಜನರು ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಸಭೆಯಲ್ಲಿ ನಿರ್ದೇಶಕರುಗಳಾದ ಕೃಷ್ಣ ಎಸ್ ಪೂಜಾರಿ , ಜಯಂತ್ ಕೆ. ಪೂಜಾರಿ, ಸುಂದರ ಎಸ್ ಕೋಟಿಯಾನ್, ಮಾಧವ ಕೋಟಿಯಾನ್, ಬಾಳಪ್ಪಾ ಕಾಳೆನಟ್ಟಿ ಹಾಗು ರೇವತಿ ಎಸ್ ಪೂಜಾರಿ ಉಪಸ್ಥಿತರಿದ್ದರು ಸಂಘದ ಸಲಹಾ ಸಮಿತಿಯ ಸದಸ್ಯರು, ಸಿಬ್ಬಂದಿವರ್ಗದವರು ಹಾಗು ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು. ಶಾಖಾ ವ್ಯವಸ್ಥಾಪಕರಾದ ಚಂದ್ರ ಹೆಚ್. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವಂದಿಸಿದರು.