ಕಬ್ಬಿನ ಬಾಕಿ ಬಿಲ್: ವಿಚಾರಣೆಯ ಸಭೆ ಮುಂದೂಡಿಕೆ

0

ಬೆಳಗಾವಿ, ಡಿ.15: ಆಯುಕ್ತರು, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 17 ಹಾಗೂ 18 ರಂದು ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ನಡೆಯಲಿದ್ದ ಕಬ್ಬಿನ ಬಾಕಿ ಬಿಲ್ಲಿನ ವಿಚಾರಣೆಯ ಸಭೆಯನ್ನು ಮುಂದೂಡಲಾಗಿದೆ.

ಸಕ್ಕರೆ ಕಾರ್ಖಾನೆಗಳಾದ ಶಿವಶಕ್ತಿ ಶುಗರ್ಸ್ ಲಿ. ಸೌದತ್ತಿ, ತಾ: ರಾಯಬಾಗ, ಶಿವಸಾಗರ ಶುಗರ್ಸ್ ಲಿ. ತಾ: ರಾಮದುರ್ಗ, ಓಂ ಶುಗರ್ಸ್ ಲಿ. ಜೈನಾಪೂರ ತಾ: ಚಿಕ್ಕೋಡಿ, ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ, ತಾ:ಗೋಕಾಕ, ರೇಣುಕಾ ಶುಗರ್ಸ್ ಲಿ. ಕೊಕಟನೂರ ತಾ: ಅಥಣಿ, ವೆಂಕಟೇಶ್ವರ ಪಾವರ್ ಪ್ರೋ.ಲಿ. ಬೆಡಿಕೀಹಾಳ ತಾ: ಚಿಕ್ಕೋಡಿ, ಉಗಾರ ಶುಗರ್ಸ್ ಲಿ. ಉಗಾರಖುರ್ದ ತಾ:ಅಥಣಿ, ಶಿರಗುಪ್ಪಿ ಶುಗರ್ಸ್ ಲಿ. ಕಾಗವಾಡ, ಅಥಣಿ ಶುಗರ್ಸ್ ಲಿ. ಕೆಂಪವಾಡ ತಾ:ಅಥಣಿ ಮತ್ತು ಚಿದಾನಂದ ಬಸಪ್ರಬು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಚಿಕ್ಕೋಡಿ ಇವರ ವಿಚಾರಣೆಯನ್ನು ನಿಗದಿಗೊಳಿಸಲಾಗಿತ್ತು.

ಆದರೆ ಸದರಿ ಕಾರ್ಖಾನೆಗಳ ಹಾಗೂ ಅರ್ಜಿದಾರರ ವಿಚಾರಣೆಯನ್ನು ಆಡಳಿತಾತ್ಮಕ ಕಾರಣಗಳಿಂದಾಗಿ ಮುಂದೂಡಲಾಗಿದ್ದು, ಮುಂದಿನ ದಿನಾಂಕ ಮತ್ತು ಸ್ಥಳವನ್ನು ತಿಳಿಸಲಾಗುವುದು ಎಂದು ಆಯುಕ್ತರು, ಕಬ್ಬು ಹಾಗೂ ಸಕ್ಕರೆ ನಿರ್ದೇಶಕರು, ಬೆಂಗಳೂರು ಇವರು ಈ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.