ಪಾರ್ಟಿ ನೆಪದಲ್ಲಿ ಗೆಳತಿಯನ್ನು ಆಹ್ವಾನಿಸಿ ಕಾಮುಕ ಗೆಳೆಯರು ಲೈಂಗಿಕ ದೌರ್ಜನ್ಯ

0

ಬೆಂಗಳೂರು: ಪಾರ್ಟಿ ನೆಪದಲ್ಲಿ ಗೆಳತಿಯನ್ನು ಆಹ್ವಾನಿಸಿ ಕಾಮುಕ ಗೆಳೆಯರು ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಆರ್.ಆರ್ ನಗರದಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಯುವಕನೊಬ್ಬನನ್ನು ಬಂಧಿಸಲಾಗಿದೆ.

ತುಷಾರ್ ಬಂಧಿತ ಯುವಕನಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಛತ್ತೀಸ್‌ಗಢ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ತುಷಾರ್ ಹಾಗೂ ಆತನ ಸ್ನೇಹಿತರು ಪಾರ್ಟಿ ಮಾಡಲುಆಹ್ವಾನ ನೀಡಿದ್ದರು.

ಈ ವೇಳೆ ತನ್ನದೇ ಪರಿಚಯವಿರುವ ಗೆಳೆಯರು ಅಂತ ಯುವತಿ ಪಾರ್ಟಿಗೆ ಹೋಗಿದ್ದ ವೇಳೆಯಲ್ಲಿ ಎಲ್ಲರೂ ಕುಡಿದ ನಶೆಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಇದೇ ವೇಳೆ ಯುವತಿ ಫ್ಲಾಟ್‌ ನಿಂದ ಹೊರಗೆ ಕಿರುಚಿಕೊಂಡು ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.