ಮನೆ ಪಾಠಕ್ಕೆ ಹೋಗಿದ್ದ ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕಿಯ ಪತಿಯೇ ಅತ್ಯಾಚಾರ

0

ಬೆಂಗಳೂರು: ಮನೆ ಪಾಠಕ್ಕೆ ಹೋಗಿದ್ದ ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕಿಯ ಪತಿಯೇ ಅತ್ಯಾಚಾರ ನಡೆಸಿರುವ ಘಟನೆಯೊಂದು ಮಾಚೋಹಳ್ಳಿಯಲ್ಲಿ ನಡೆದಿದೆ.

ರವಿ ಕಿರಣ್ ಅಲಿಯಾಸ್ ಕಿರಣ್ (26) ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದಾನೆ.

ಆರೋಪಿಯ ಪತ್ನಿ ಟ್ಯೂಷನ್ ನಡೆಸುತ್ತಿದ್ದರು. ಆರೋಪಿ ಕ್ಯಾಬ್ ಚಾಲಕನಾಗಿದ್ದನೆಂದು ವರದಿಯಾಗಿದೆ.

ವರ್ಷದ ಹಿಂದೆ ಘಟನೆ ನಡೆದಿದ್ದು, ಇದೀಗ ಘಟನೆ ಬೆಳಕಿಗೆ ಬಂದಿದೆ. 10ನೇ ತರಗತಿ ಓದುತ್ತಿದ್ದ ಬಾಲಕಿ ಮನೆಪಾಠಕ್ಕೆಂದು ಶಿಕ್ಷಕಿಯ ಮನೆಗೆ ಬಂದಿದ್ದಾಳೆ.

ಈ ವೇಳೆ ಶಿಕ್ಷಕಿ ಮನೆಯಲ್ಲಿರಲಿಲ್ಲ ಎನ್ನಲಾಗಿದ್ದು, ಈ ವೇಳೆಯನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿ ಬಾಲಕಿಯನ್ನು ರೂಮಿನೊಳಗೆ ಎಳೆದೆಯ್ದು ಅತ್ಯಾಚಾರವೆಸಗಿದ್ದಾನೆಂದು ವರದಿಯಾಗಿದೆ.

ಘಟನೆ ಬಗ್ಗೆ ಬಾಲಕಿ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಆದರೆ, ಗೌರವಕ್ಕೆ ಅಂಜಿದ ಅವರು ಪೊಲೀಸರಿಗೆ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ.

ಅಲ್ಲದೆ, ತಮ್ಮ ಪುತ್ರಿಗೂ ವಿಚಾರವನ್ನು ಯಾರಿಗೂ ಹೇಳದಂತೆ ತಿಳಿಸಿದ್ದಾರೆ.

ಈ ನಡುವೆ ಆರೋಪಿ ಕಿರಣ್ ತನ್ನ ಸ್ನೇಹಿತರೊಂದಿಗೆ ಈ ವಿಚಾರವನ್ನು ಹೇಳಿಕೊಂಡಿದ್ದು, ಆರೋಪಿ ಸ್ನೇಹಿತರು ನೆರೆಮನೆಯವರೊಂದಿಗೆ ಹೇಳಿದ್ದಾರೆ.

ಬಳಿಕ ನೆರೆಮನೆಯವರು ಕೂಡಲೇ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದ್ದಾರೆ.

ಬಾಲಕಿಯ ಪೋಷಕರು ಈ ಬಗ್ಗೆ ದೂರು ನೀಡಿದ್ದು, ದೂರಿನ ಅನ್ವಯ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.