ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ರೈತರೊಂದಿಗೆ ಸರಕಾರ ನಡೆಸಿದ.ಮಾತುಕತೆ ಮತ್ತೆ ಮತ್ತೆ ವಿಫಲವಾಗುತ್ತಿದೆ ಎಂದಿರುವ ಸುಪ್ರೀಂಕೋರ್ಟ್

0

ಹೊಸದಿಲ್ಲಿ: ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ರೈತರೊಂದಿಗೆ ಸರಕಾರ ನಡೆಸಿದ ಮಾತುಕತೆಗಳು ಯಾವುದೇ ಕೆಲಸ ಮಾಡುತ್ತಿಲ್ಲ.

ಮಾತುಕತೆ ಮತ್ತೆ ಮತ್ತೆ ವಿಫಲವಾಗುತ್ತಿದೆ ಎಂದಿರುವ ಸುಪ್ರೀಂಕೋರ್ಟ್ ಕೇಂದ್ರ ಸರಕಾರದ ಪ್ರತಿನಿಧಿಗಳು ಹಾಗೂ ದೇಶಾದ್ಯಂತದ ರೈತ ಸಂಘಟನೆಗಳನ್ನು ಒಳಗೊಂಡಿರುವ ಸಮಿತಿ ರಚಿಸುವಂತೆ ಸಲಹೆ ನೀಡಿದೆ.

ರೈತರ ಪ್ರತಿಭಟನೆಯು ಶೀಘ್ರದಲ್ಲೇ ರಾಷ್ಟ್ರೀಯ ಸಮಸ್ಯೆಯಾಗಲಿದೆ ಹಾಗೂ ಮಾತುಕತೆಯ ಮೂಲಕ ಆದಷ್ಟು ಬೇಗನೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ನೇತೃತ್ವದ

ನ್ಯಾಯಪೀಠ ರೈತರ ಪ್ರತಿಭಟನೆ ಪರವಾಗಿ ಹಾಗೂ ವಿರೋಧಿಸಿ ಸಲ್ಲಿಸಿರುವ ಅರ್ಜಿಗಳ ಆಲಿಕೆ ವೇಳೆ ಹೇಳಿತು.

ಸರಕಾರವು ಮಾತುಕತೆಗೆ ಸಿದ್ಧವಿದೆ. ರೈತರ ಪ್ರತಿಕ್ರಿಯೆ ಅತ್ಯಂತ ಮುಖ್ಯವಾಗಿದೆ. ನಾವು ರೈತರ ವಿರುದ್ದ ಏನನ್ನೂ ಮಾಡುವುದಿಲ್ಲ. ಮಾತುಕತೆಯು ಷರತ್ತು ಆಧಾರದಲ್ಲಿ ಇರುತ್ತದೆ.

ವಿವಿಧ ಮಂತ್ರಿಗಳು ರೈತರೊಂದಿಗೆ ಈಗಾಗಲೆ ಮಾತನಾಡಿದ್ದಾರೆ. ಅವರು ಮಾತುಕತೆಗೆ ಬೆನ್ನುತೋರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಕೇಂದ್ರ ಸರಕಾರ ತಿಳಿಸಿದೆ.