ಸೈನಿಕ ನಗರಕ್ಕೆ ಬೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ಆಲಿಸಿದ ಶಾಸಕ ಅನಿಲ ಬೆನಕೆ:

0

ಬೆಳಗಾವಿ 15 : ಸೈನಿಕ ನಗರಕ್ಕೆ ಬೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ಆಲಿಸಿದ ಶಾಸಕ ಅನಿಲ ಬೆನಕೆ: ಮಂಗಳವಾರದಂದು ಶಾಸಕ ಅನಿಲ ಬೆನಕೆರವರು ಸೈನಿಕ ನಗರಕ್ಕೆ ಬೇಟಿ ನೀಡಿ ಅಲ್ಲಿನ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು ಅವರು ನಗರದ ಮೂಲಭೂತ

ಸೌಲಭ್ಯಗಳಾದ ಕಸದ ವಿಲೇವಾರಿ ಸಮಸ್ಯೆ, ಬೀದಿ ದೀಪ, ನೀರಿನ ಪೂರೈಕೆ ಹಾಗೂ ರಸ್ತೆ ನಿರ್ಮಾಣ ಮಾಡುವುದರ ಕುರಿತು ಸಾರ್ವಜನಿಕರೊಂದಿಗೆ ಚರ್ಚಿ ನಡೆಸಿದರು.

 

ಶಾಸಕ ಅನಿಲ ಬೆನಕೆರವರು ನಂತರದಲ್ಲಿ ಎಲ್ಲ ಸ್ಥಳಿಯರೊಂದಿಗೆ ಮಹಾನಗರ ಪಾಲಿಕೆಯ ಆಯುಕ್ತರನ್ನು ಬೇಟಿ ಮಾಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಆದಷ್ಟು ಬೇಗನೆ ನಗರದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸೈನಿಕ ನಗರದ ಎಲ್ಲ ರಹವಾಸಿಗಳು ಉಪಸ್ಥಿತರಿದ್ದರು.