ಆರ್.ಎನ್. ಶೆಟ್ಟಿ ಅವರ ನಿಧನಕ್ಕೆ ಡಾ.ಕೋರೆ ಸಂತಾಪ

ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ ಮಹಾನ ಸಮಾಜಮುಖಿ ಚಿಂತಕರು ಹಾಗೂ ಕೆಎಲ್‌ಇ ಸಂಸ್ಥೆಯ ಆಸ್ಪತ್ರೆ ನಿರ್ಮಾಣದಲ್ಲಿ ಮೌಲಿಕ ಯೋಗದಾನ ನೀಡಿದ ಸಾಧಕ ಡಾ.ಆರ್.ಎನ್.ಶೆಟ್ಟಿ ಅವರು ನಿಧನರಾಗಿದ್ದು ನಾಡಿನ ಪ್ರವಾಸೋದ್ಯಮ ಹಾಗೂ ನಿರ್ಮಾಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ ಪ್ರಭಾಕರ ಕೋರೆ ಅವರು ಕಂಬನಿ ಮಿಡಿದಿದ್ದಾರೆ.

0

ಮುಖ್ಯವಾಗಿ ಉತ್ತರ ಕರ್ನಾಟಕದ ನೀರಾವರಿ, ರಸ್ತೆ ಹಾಗೂ ನಮ್ಮದೇ ಸಂಸ್ಥೆಯ ಆಸ್ಪತ್ರೆಯನ್ನು ನಿರ್ಮಿಸಿ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಅವರ ಶ್ರಮ ಅತ್ಯಂತ ಶ್ಲಾಘನೀಯವಾದದ್ದು ಎಂದರು.

ಈ ಸುದ್ದಿ ಓದಿ : ರೈತರ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಸಿಗಲಿದೆ: ವೆಂಕಯ್ಯ ನಾಯ್ಡು ಆಶಿಸಿದ್ದಾರೆ

ಬೆಳಗಾವಿ ಜಿಲ್ಲೆಯ ಮಲಪ್ರಭಾ ಹಾಗೂ ಘಟಪ್ರಭಾ ಆಣೆಕಟ್ಟು ನಿರ್ಮಿಸಿ ಜಿಲ್ಲೆಯಲ್ಲಿ ನೀರಾವರಿ ಕಲ್ಪಿಸುವಲ್ಲಿ ಅವರ ಶ್ರದ್ದೆ, ಧಾರ್ಮಿಕ, ಸಾಂಸ್ಕೃತಿಕ ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌರ‍್ಯ, ವಿದ್ಯುತ್ ಹಾಗೂ ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಮಾಡಿದ ಕಾರ್ಯ ಸದಾ ಸ್ಮುರ್ತಿಪಟಲದಲ್ಲಿ ಹರಿದಾಡುತ್ತದೆ ಅಲ್ಲದೇ ಅವರು ತಮ್ಮ ಕಾರ್ಯಗಳಿಂದ ಅಜರಾಮರಾಗಿದ್ದಾರೆ ಎಂದರು.

ಈ ಸುದ್ದಿ ಓದಿ : ಮಂಡ್ಯದಲ್ಲಿ ಪಾರದರ್ಶಕ ಗ್ರಾಪಂ ಚುನಾವಣೆಗೆ ಅಗತ್ಯ ಕ್ರಮ

ಮೃತಪಟ್ಟ ಡಾ. ಆರ್ ಎನ್ ಶೆಟ್ಟಿ ಅವರ ಆತ್ಮಕ್ಕೆ ಸೃಷ್ಟಿಕರ್ತ ಭಗವಂತ ಚಿರಶಾಂತಿಯನ್ನು ದಯಪಾಲಿಸಲಿ. ಅವರ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತ, ಕೆಎಲ್‌ಇ ಸಂಸ್ಥೆಯ ಸಮಸ್ತ ಕುಟುಂಬದ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.