“ಯುವ ಸೌರಭ” 2020-21 ನಾಡಿನ ವಿವಿಧ ಕಲೆಗಳಲ್ಲಿಯೂ ಆಸಕ್ತಿ ವಹಿಸಿ ಕಲಾ ಪರಂಪರೆ ಮುಂದುವರಿಸಲು ಮ.ನಿ.ಪ್ರ ಗುರುಸಿದ್ಧೇಶ್ವರ ಮಹಾಸ್ವಾಮಿಗಳ ಕರೆ

0

 

ಬೆಳಗಾವಿ, ಡಿ.16 : ಇಂದಿನ ಯುವಜನರು ಶಿಕ್ಷಣ ಕಲಿಯುವುದರ ಜೊತೆಗೆ ನಮ್ಮ ನಾಡಿನ ವಿವಿಧ ಕಲೆಗಳಲ್ಲಿಯೂ ಆಸಕ್ತಿ ವಹಿಸಿ ನಮ್ಮ ಕಲೆಯನ್ನ ಕರಗತ ಮಾಡಿಕೊಂಡು ನಮ್ಮ ಕಲಾ ಪರಂಪರೆ ಮುಂದುವರೆಸಬೇಕೆಂದು ಶ್ರೀ ಮ.ನಿ.ಪ್ರ ಗುರುಸಿದ್ಧೇಶ್ವರ ಮಹಾಸ್ವಾಮಿಗಳು ಕಾರಿಮಠ, ಹತ್ತರಗಿ ಯುವಜನರಿಗೆ ಕರೆ ನೀಡಿದರು.

ಅವರು ಕಳೆದ ದಿನಾಂಕ 15 ಡಿಸೆಂಬರ 2020 ರಂದು ಸಂಕೇಶ್ವರ ನೇಸರಿ ಗಾರ್ಡನ್ ಸಭಾ ಭವನದಲ್ಲಿ ಆಯೋಜಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಳಗಾವಿ, ಶ್ರೀ ರಾಮಕೃಷ್ಣ ಚಂದಗರಿ ಕಲಾ ಪ್ರತಿಷ್ಠಾನ, ಸಂಕೇಶ್ವರ ಇವರ ಸಹಯೋಗದಲ್ಲಿ ಆಯೋಜಿಸಿದ “ಯುವ ಸೌರಭ” 2020-21 ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ನಮ್ಮ ನಾಡಿನ ಜನಪದ ಕಲೆ ಜನಪದ ಸಂಗೀತ ಶ್ರೀಮಂತ ಕಲೆಗಳಾಗಿದ್ದು ಕಲಾ ಪ್ರದರ್ಶನದಿಂದ ಕಲಾವಿದನಿಗೂ ಹಾಗೂ ನೋಡುಗರಿಗು ಸಂತೋಷವನ್ನುಂಟು ಮಾಡುತ್ತದೆ ಎಂದರು.
ಸಂಕೇಶ್ವರ ಪುರಸಭೆಯ ಮುಖ್ಯಾಧಿಕಾರಿಗಳಾದ ಜಗದೀಶ ಈಟಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಹಮೀದಾಬೇಗಂ ದೇಸಾಯಿ ಇವರು ಮಾತನಾಡಿ ನಮ್ಮ ಕನ್ನಡ ಭಾಷೆ ಉಳಿಸುವುದು ಜೊತೆಗೆ ನಮ್ಮ ಸಾಂಸ್ಕøತಿಕ ಕಲಾ ಪರಂಪರೆ ಉಳಿಸುವುದು ಅಷ್ಟೇ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಯುವ ಸೌರಭ ಕಾರ್ಯಕ್ರಮ ಗಡಿನಾಡು ಸಂಕೇಶ್ವರದಲ್ಲಿ ಆಯೋಜಿಸಿದ್ದು ಸೂಕ್ತವಾಗಿದೆ ಎಂದು ಇಲಾಖೆಯನ್ನು ಅಭಿನಂದಿಸಿದರು.

ವೇದಿಕೆಯ ಮೇಲೆ ಹಿರಿಯ ಸಾಹಿತಿಗಳು ಎಲ್.ವಿ.ಪಾಟೀಲ, ಕನ್ನಡಪರ ಕಾರ್ಯಕರ್ತರಾದ ಕಿರಣ ನೇಸರಿ, ಸಂಗೀತ ಕಲಾವಿದರಾದ ರೋಹಿಣಿ ವಿನಾಯಕ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಯುವ ಕಲಾವಿದರಾದ ಶ್ರೀ ಪ್ರಣವ ಪಿ. ವಿನಾಯಕ, ಆರತಿ ಮಾದರ, ಪುಂಡಲೀಕ ದೊಡ್ಡಮನಿ, ಮಹಾಂತೇಶ ಕಂಬಾರ, ಚೈತ್ರಾ ಯಾಪಲಪರವಿ ಇವರನ್ನು ಶಾಲು ಹೋದಿಸಿ, ಫಲ ಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಹಾಯಕ ನಿರ್ದೇಶಕರಾದ ವಿದ್ಯಾವತಿ ಹೆಚ್. ಭಜಂತ್ರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಭಾವಂತ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಸೌರಭ ಕಾರ್ಯಕ್ರಮ ಇಲಾಖೆಯಿಂದ ನಡೆಸುತ್ತಿದ್ದು ಯುವಕರನ್ನು ಗುರುತಿಸಲು ಇದೊಂದು ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನಂತರ ನಡೆದ ಯುವ ಸೌರಭ ಸಾಂಸ್ಕøತೀಕ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ- ಪ್ರಣವ ಪಿ. ವಿನಾಯಕ ತಂಡ, ಬೆಳಗಾವಿ, ವಚನ ಸಂಗೀತ- ಮಹಾಲಕ್ಷ್ಮೀ ದೊಡ್ಡಮನಿ ಹಾಗೂ ತಂಡ, ಶಿವಭಜನಾ ಪದ- ಮಹಾಂತೇಶ ಕಂಬಾರ, ತಂಡ, ಪಾಮಲದಿನ್ನಿ, ಕೋಲಾಟ ನೃತ್ಯ- ಗುರುಪ್ರಸಾದ ಕಲಾಚಂದ್ರ ಹಾಗೂ ತಂಡ ನಿಪ್ಪಾಣಿ, ತತ್ವಪದ- ಜ್ಯೋತಿ ಮಠಪತಿ ಹಾಗೂ ತಂಡ ಹೆಬ್ಬಾಳ, ಸಮೂಹ ಗೀತೆ- ಸ್ವರಸುರಭಿ ಸಂಗೀತ ಮಹಾವಿದ್ಯಾಲಯ,

ಸಂಕೇಶ್ವರ, ಸಮೂಹ ನೃತ್ಯ- ಚಿನ್ನು ವಸ್ತ್ರದ ತಂಡ, ಹುಬ್ಬಳಿ, ಡೋಳ್ಳುಕುಣಿತ- ಅಕ್ಕವiಹಾದೇವಿ ಮಾದರ ತಂಡ ಜೋಕಾನಟ್ಟಿ, ಸಣ್ಣಾಟ ಪ್ರದರ್ಶನ- ಶ್ರಿ ಜಡಿಸಿದ್ದೇಶ್ವರ ಸಣ್ಣಾಟಕ ಕಲಾ ತಂಡ, ಬಾಗೇವಾಡಿ ಕಲಾ ತಂಡದವರು ವರ್ಣ ರಂಜಿತ ಕಲಾಪ್ರದರ್ಶನ ನೀಡಿ ಕಲಾಪ್ರೇಕ್ಷಕರಿಗೆ ಕಲಾ ರಸದೌತನ ನೀಡಿದರು. ಭರತ ಕಲಾಚಂದ್ರ, ಸುಜಾತಾ ಮಗದುಮ್ಮ ಕಾರ್ಯಕ್ರಮ ನಿರೂಪಿಸಿರು. ಸುರೇಶ ಚಂದಗರಿ ಸ್ವಾಗತಿಸಿದರು. ಅಕ್ಬರ ಸನದಿ ವಂದಿಸಿದರು.