ಬಾಲಕಿ ನಾಪತ್ತೆ

0

 

ಬೆಳಗಾವಿ, ಡಿ.16 : ಅಂಬೇಡ್ಕರ್ ನಗರ ಅನುಗೋಳ ನಿವಾಸಿಯಾದ ಲಕ್ಷ್ಮೀ ವಯಸ್ಸು (15 ವರ್ಷ) ಅವರು ಡಿಸೆಂಬರ್ 12 ರಂದು ಸಾಯಂಕಾಲ 05 ಗಂಟೆಗೆ ಅಂಗಡಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ್ಮೀ ಸತೀಶ ಭಜಂತ್ರಿ ವಯಸ್ಸು (15) ಹೊಳು ಮುಖ, ಸಾದಾಗಪ್ಪು ಮೈಬಣ್ಣ, ಉದ್ದ ಮೂಗು, ಎತ್ತರವಾದ ಹಣೆ ಮತ್ತು ನೀಲಿ ಬಣ್ಣದ ಗಾಗರಾ ಧರಿಸುತ್ತಾರೆ. 4.8 ಅಡಿ ಎತ್ತರ ಇದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.

ಈ ಪ್ರಕಾರ ಚಹರೆಯುಳ್ಳ ತಾಯಿ ಹಾಗೂ ಮಗುವಿನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಟಿಳಕವಾಡಿ ಪೋಲಿಸ್ ಠಾಣೆಯ ದೂರವಾಣಿ ಸಂಖ್ಯೆ 0831-2405236 ನ್ನು ಸಂಪರ್ಕಿಸಲು ಠಾಣೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.