8,59,456 ಅಕ್ರಮ ಮದ್ಯ. ವಶ

0

ಅಕ್ರಮ ಮದ್ಯ ವಶ
ಬೆಳಗಾವಿ, ಡಿ.16 : ಡಿಸೆಂಬರ್ 16 ಕಣಕುಂಬಿ ತನಿಖಾ ಠಾಣೆ ವ್ಯಾಪ್ತಿಯಲ್ಲಿ ಬರುವ ಕಣಕುಂಬಿ ರಸ್ತೆಯಲ್ಲಿ ಬೇರೆ ರಾಜ್ಯಗಳಿಂದ ಬರುವಂತ ವಾಹನಗಳ ತಪಾಸಣೆಯನ್ನು ಮಾಡುವಾಗ ಗೂಡ್ಸ್ ಗಾಡಿಯಲ್ಲಿ 1087.200 ಲೀ. ಅಕ್ರಮವಾಗಿ ಗೋವಾದಿಂದ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ನಿರೀಕ್ಷಕರು, ಹಾಗೂ ತನಿಖಾ ಠಾಣೆಯ ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಗೋವಾ ರಾಜ್ಯದಲ್ಲಿ ಮಾರಾಟವಾಗುತ್ತಿದ್ದಂತ 125 ನಮೂನೆಯ ಮದ್ಯವನ್ನು ತುಂಬಿಕೊಂಡು ಬರುತ್ತಿದ್ದ ಗೂಡ್ಸ್ ಕೆರಿಯರ್‍ನ್ನ ಈ ದಾಳಿಯಲ್ಲಿ ಜಪ್ತು ಮಾಡಿಕೊಂಡಿದ್ದು ರಿತೇಶಬಾಯಿ ಪಾಟೀಲ (37) ಆರೊಪಿಯನ್ನು ಬಂಧಿಸಲಾಗಿದ್ದು, ಒಟ್ಟು 8,59,456 ರೂಗಳ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.


ಸದರಿ ದಾಳಿಯಲ್ಲಿ ಅಬಕಾರಿ ಜಂಟಿ ಆಯುಕ್ತರಾದ ವೈ. ಮಂಜುನಾಥ ಅಬಕಾರಿ ಉಪ ಆಯುಕ್ತರಾದ ಜಯರಾಮೇಗೌಡ ಹಾಗೂ ಅಬಕಾರಿ ಉಪ ಅಧಿಕ್ಷಕರಾದ ಚನಗೌಡ ಎಸ್.ಪಾಟೀಲ ಹಾಗೂ ಎಸ್.ಎಮ್.ಪೂಜಾರಿ, ಬಿ.ಎ.ಪಾಂಗೇರಿ, ಸುನೀಲ ಪಾಟಿಲ, ಎಂ.ಎಫ್.ಕಟಗೆನ್ನವರ ಹಾಗೂ ಅಬಕಾರಿ ಸಿಬ್ಬಂದಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.