ಕಬ್ಬು ಬೆಳೆಗಾರರ ಹಿತ ಕಾಪಾಡುವ ಸದುದ್ದೇಶದಿಂದ ಕೇಂದ್ರ ಸರ್ಕಾರ 3600 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆಗೆ

0

ಬೆಳಗಾವಿ : ಕಬ್ಬು ಬೆಳೆಗಾರರ ಹಿತ ಕಾಪಾಡುವ ಸದುದ್ದೇಶದಿಂದ ಕೇಂದ್ರ ಸರ್ಕಾರ 3600 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆಗೆ ಅನುಮೋದಿಸಿರುವದರಿಂದ ಮೋದಜಿ ನೇತೃತ್ವದ ಸರ್ಕಾರ ರೈತ ಪರ ಸರ್ಕಾರ ಎನ್ನುವದು ಮತ್ತೊಮ್ಮೆ ಸಾಬಿತವಾಗಿದೆ ಎಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸುದ್ದಿ ಓದಿ : ಮಂಡ್ಯದಲ್ಲಿ ಪಾರದರ್ಶಕ ಗ್ರಾಪಂ ಚುನಾವಣೆಗೆ ಅಗತ್ಯ ಕ್ರಮ

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಬುಧವಾರ ದೇಶದ ಸಕ್ಕರೆ ಕಾರ್ಖಾನೆಯಿಂದ ರಪ್ತುಗೊಂಡ ಸಕ್ಕರೆಗೆ ಸಬ್ಸಿಡಿ ಹಣ ಬಿಡುಗಡೆಗೊಳಿಸಿ ಕಬ್ಬು ಒದಗಿಸಿದ 5ಕೋಟಿ ರೈತರ ಹಾಗೂ 5ಲಕ್ಷ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಸಂದಾಯಕ್ಕೆ ಕ್ರಮ ಕೈಗೊಂಡದ್ದರ ಫಲವಾಗಿ ರಾಜ್ಯದಲ್ಲಿ ಕಬ್ಬು ಪೊರೈಸಿದ ರೈತರ ಬಾಕಿ ಹಣ ಸುಮಾರು 600 ಕೋಟಿ ಅವರ ಖಾತೆಗೆ ಸೇರಲಿದೆ ಎಂದರು.
ಬೆಳಗಾವಿ ಜಿಲ್ಲೆಯ 26 ಸಕ್ಕರೆ ಕಾರ್ಖಾನೆಗೆ 200 ಕೋಟಿಗೂ ಅಧಿಕ ಮೊತ್ತ ಬರಲಿದೆ.

ಈ ಸುದ್ದಿ ಓದಿ : ರೈತರ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಸಿಗಲಿದೆ: ವೆಂಕಯ್ಯ ನಾಯ್ಡು ಆಶಿಸಿದ್ದಾರೆ

ದೇಶದಲ್ಲಿ ಈ ವರ್ಷ 310 ಲಕ್ಷ ಕೋಟಿ ಟನ್ ಸಕ್ಕರೆ ಉತ್ಪಾದನೆಯಾಗಿದ್ದು ಅದರಲ್ಲಿ ರಪ್ತುಗೊಂಡ 60 ಲಕ್ಷ ಟನ್ ಸಕ್ಕರೆಗೆ ಸಬ್ಸಿಡಿ ನೀಡಿ ರೈತರಿಗೆ, ಕಾರ್ಮಿಕರಿಗೆ ಹಾಗೂ ಕಾರ್ಖಾನೆಗೆ ಉತ್ತೇಜನ ನೀಡಿ ಕೃಷಿ ಕೇತ್ರದಲ್ಲಿ ಅದ್ವಿತೀಯ ಸಾಧನೆಗೆ ಬಿಜೆಪಿ ಸರ್ಕಾರ ಬದ್ದವಾಗಿದ್ದು ನರೇಂದ್ರ ಮೊದಿಜಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ರೈತ ಸಮುದಾಯದ ಪರವಾಗಿ ಧನ್ಯವಾದ ಅರ್ಪಿಸಿದರು.