ಅಂತರ್‍ರಾಜ್ಯ ಕುಖ್ಯಾತ ಕಳ್ಳರ ಬಂಧನ; 51,60,000/- ರೂ. ಮೌಲ್ಯದ ಬಂಗಾರದ ಆಭರಣ, ಕಾರ್ ಹಾಗೂ ಕಂಟ್ರಿ ಪಿಸ್ತೂಲ್ ವಶಕ್ಕೆ

0

ಬೆಳಗಾವಿ : ಅಂತರ್‍ರಾಜ್ಯ ಕುಖ್ಯಾತ ಕಳ್ಳರ ಬಂಧನ; 51,60,000/- ರೂ. ಮೌಲ್ಯದ ಬಂಗಾರದ ಆಭರಣ, ಕಾರ್ ಹಾಗೂ ಕಂಟ್ರಿ ಪಿಸ್ತೂಲ್ ವಶಕ್ಕೆ

ದಿನಾಂಕಃ 06-12-2020 ರಂದು ಝಾಡಶಹಾಪೂರ ಗ್ರಾಮದಲ್ಲಿ ಮನೆಕಳ್ಳತನ ಮಾಡುವಾಗ ಸಿಕ್ಕ ಆರೋಪಿತರಾದ 1) ಪ್ರಕಾಶ ವಿನಾಯಕ ಪಾಟೀಲ (30) ಸಾ|| ಸರಸ್ವತಿ ನಗರ, ಶಹಾಪೂರ ಬೆಳಗಾವಿ ಹಾಲಿ: ಜರಿವಾಡಾ ಸಾಕಳಿ ಗೋವಾ ಹಾಗೂ 2) ನಿತೈ ಖಾಲಿಪದ ಮಂಡಲ (41) ಸಾ: ಕಾಲಿತಲಾ, ತಾ:ಜಿ: ಎನ್ 24 ಪರ್ಗಾನಸ್, ರಾಜ್ಯ: ವೆಸ್ಟ ಬೆಂಗಾಲ ಇವರನ್ನು ವಶಕ್ಕೆ ಪಡೆದುಕೊಂಡು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಆರೋಪಿತರನ್ನು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಸದರಿಯವರು ಬೆಳಗಾವಿ ಗ್ರಾಮೀಣ, ಎಪಿಎಮ್‍ಸಿ, ಕ್ಯಾಂಪ್, ಮಾರಿಹಾಳ, ಮಾಳಮಾರುತಿ ಪೊಲೀಸ್ ಠಾಣಾ ಹದ್ದಿಗಳಲ್ಲಿ ಹಲವಾರು ಹಗಲು ಮನೆಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಅವರಿಂದ ರೂ. 2,40,000/- ಮೌಲ್ಯದ 848 ಗ್ರಾಂ. ಬಂಗಾರದ ಆಭರಣಗಳು ರೂ. 60,000/-ಮೌಲ್ಯದ ಕಂಟ್ರಿ ಪಿಸ್ತೂಲ್ & 5 ಜೀವಂತ ಗುಂಡುಗಳು ಹಾಗೂ ಕಳ್ಳತನಕ್ಕೆ ಬಳಸಿದ ರೂ.8,00,000/- ಮೌಲ್ಯದ ಹೊಂಡೈ ಕ್ರೇಟಾ ಕಾರ್ ಒಂದು ಹೀಗೆ ಒಟ್ಟು ಒಟ್ಟು ರೂ.51,60,000/- ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಂಡು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಈ ಪ್ರಕರಣದ ಪತ್ತೆ ಕುರಿತು ಶ್ರೀ ಜಿ. ವಾಯ್. ಗುಡಾಜಿ ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ. ಸುನೀಲಕುಮಾರ ನಂದೇಶ್ವರ, ಪಿಐ ಬೆಳಗಾವಿ ಗ್ರಾಮೀಣರವರ ನೇತೃತ್ವದಲ್ಲಿ ಶ್ರೀ. ಆನಂದ ಆದಗೊಂಡ ಪಿಎಸ್‍ಐ (ಕಾ&ಸು) ಹಾಗೂ ಸಿಬ್ಬಂದಿ ಜನರಾದ ಬಿ. ಎ. ಚೌಗಲಾ, ವಾಯ್. ವಾಯ್. ತಳೇವಾಡ, ಸಿ. ಎಮ್. ಹುಣಚ್ಯಾಳ, ಎಮ್. ಎಸ್. ಗಾಡವಿ, ಎನ್. ಎಮ್. ಚಿಪ್ಪಲಕಟ್ಟಿ, ಜಿ. ವಾಯ್. ಪೂಜಾರ, ಎಸ್. ಎಮ್. ಲೋಕುರೆ ರವರ ಈ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ (ಕಾ&ಸು) ಹಾಗೂ (ಅ&ಸಂ) ರವರುಗಳು ಶ್ಲಾಘಿಸಿದ್ದಾರೆ.