ಟಿಳಕವಾಡಿ ಪೊಲೀಸ್‍ರಿಂದ ವಾಹನ ಕಳ್ಳನ ಬಂಧನ; 2 ಲಕ್ಷಮೌಲ್ಯದ ಒಟ್ಟು 07 ವಾಹನಗಳು ಜಪ್ತ

0

ಬೆಳಗಾವಿ : ಟಿಳಕವಾಡಿ ಪೊಲೀಸ್‍ರಿಂದ ವಾಹನ ಕಳ್ಳನ ಬಂಧನ; 2 ಲಕ್ಷಮೌಲ್ಯದ  ಒಟ್ಟು 07 ವಾಹನಗಳು ಜಪ್ತ ದಿನಾಂಕ: 19-11-2020 ರಂದು ತಿಲಕವಾಡಿ ಎಸ್.ವಿ.ಕಾಲನಿ, ಅರ್ಜುನ ಎಂಪೈರದ ಮುಂದೆ ನಿಲ್ಲಿಸಿದ ತಮ್ಮ ಸ್ಕೂಟರ ನಂಬರ ಕೆಎ-22/ಎಚ್‍ಇ-5864 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಮೋನೇಶ ಸಂಜು ತಿಳವಿ (23) ಸಾ: ಬಸವಣ ಕುಡಚಿ ಬೆಳಗಾವಿ ಇವರು ನೀಡದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಇಂದು ದಿನಾಂಕ. 17-12-2020 ರಂದು ಸಂಶಯುಕ್ತ ಆರೋಪಿತನಾದ ದೀಪಕ ದೇಮಾಣಿ ಲೋಹಾರ (22) ಸಾ: ಲಕ್ಷ್ಮೀ ಗಲ್ಲಿ, ಸಂತಿ ಬಸ್ತವಾಡ, ಬೆಳಗಾವಿ ಹಾಲಿ: ಕಂಗ್ರಾಳಿ ಕೆಎಚ್ ರಾಮನಗರ 3 ನೇ ಕ್ರಾಸ ಈತನನ್ನು ವಶಕ್ಕೆ ಪಡೆದುಕೊಂಡು ಕೂಲಂಕುಷ ವಿಚಾರಣೆ ಮಾಡಿದಾಗ ಸದರಿಯವನು ಬೆಳಗಾವಿ ನಗರದಲ್ಲಿ ರೂ.2 ಲಕ್ಷ ಮೌಲ್ಯದ ಒಟ್ಟು 07 ದ್ವಿ-ಚಕ್ರ ವಾಹನಗಳನ್ನು ಕಳುವು ಮಾಡಿರುವುದಾಗಿ ಒಪ್ಪಿಕೊಂಡು ಅವುಗಳನ್ನು ತೋರಿಸಿದಂತೆ ಜಪ್ತ ಪಡಿಸಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.