ಶಾಂತಿ ಕಾಲನಿ ಟಿಳಕವಾಡಿ ಮೂಲ ನಿವಾಸಿ ಸಂಜಯ. ಕಾಣೆ

0

ಬೆಳಗಾವಿ, ಡಿ.17 : ಶಾಂತಿ ಕಾಲನಿ ಟಿಳಕವಾಡಿ ಮೂಲ ನಿವಾಸಿ ಸಂಜಯ ಪ್ರಕಾಶ ಸುತಾರ (40) ವರ್ಷ ಡಿಸೆಂಬರ್ 15 ರಾತ್ರಿ 9 ಗಂಟೆ ಸುಮಾರಿಗೆ ಮೋಟರ ಸೈಕಲ್ ನಂ: ಕೆಎ-22 ಇಚ್-1861 ನೆದ್ದನ್ನು ತೆಗೆದುಕೊಂಡು ಅಂಗಡಿಗೆ ಹೋಗುತ್ತೇನೆ ಎಂದು ಹೇಳಿ ಕಾಣೆಯಾಗಿರುತ್ತಾರೆ ಎಂದು ಟಿಳಕವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜಯ ಪ್ರಕಾಶ ಸುತಾರ (40) ವರ್ಷ ಗೋಧಿ ಬಣ್ಣ, ದುಂಡು ಮುಖ, ಉದ್ದ ಮೂಗು, ಎತ್ತರವಾದ ಹಣೆ, ಕಪ್ಪು ಕೂದಲು, ಸದೃಢ ಮೈಕಟ್ಟು ಮತ್ತು ಕನ್ನಡ, ಮರಾಠಿ, ಇಂಗ್ಲೀಷ್, ಹಿಂದಿ ಭಾಷೆ ಮಾತನಾಡುತ್ತಾರೆ.

ಈ ಕುರಿತು ಚಹರೆಯುಳ್ಳ ವ್ಯಕ್ತಿಯ ಕಂಡುಬಂದಲ್ಲಿ ಟಿಳಕÀವಾಡಿ ಪೋಲೀಸ್ ಠಾಣೆ ದೂರವಾಣಿ ಸಂಖ್ಯೆ 0831-2405236 ನ್ನು ಸಂಪರ್ಕಿಸಲು ಠಾಣೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.