ಬೃಹತ್ ಲೋಕ ಅದಾಲತ್

0

ಬೆಳಗಾವಿ, ಡಿ.19 : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಪೊಲೀಸ ಇಲಾಖೆ ಹಾಗೂ ವಕೀಲರ ಸಂಘ ಇವರ ಆಶ್ರಯದಲ್ಲಿ (ಡಿ.19) ಶನಿವಾರ ಎ.ಡಿ.ಆರ್ ಕಟ್ಟಡ ಹೊಸ ನ್ಯಾಯಾಲಯ ಸಂಕೀರ್ಣದಲ್ಲಿ ಬೃಹತ್ ಲೋಕ ಅದಾಲತ್ ನಡೆಯಿತು.


ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾದ ಅದಾಲತ್‍ನಲ್ಲಿ ನ್ಯಾಯಿಕ ಸಂಧಾನಕಾರರಾಗಿ ಭಾಗವಹಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅದ್ಯಕ್ಷರು ಸಿ.ಎಂ.ಜೋಶಿ ಅವರು ಮತ್ತು ಪೊಲೀಸ್ ಆಯುಕ್ತರಾದ ಕೆ. ತ್ಯಾಗರಾಜ್ ಅವರು ಭಾಗಹಿಸಿ ಕಕ್ಷಿದಾರರ ಜತೆ ದೀರ್ಘವಾಗಿ ಸಮಾಲೋಚನೆ ನಡೆಸಿ ಪರಸ್ಪರ ಒಪ್ಪಿಗೆ ಮೇರೆಗೆ ಪ್ರಕರಣಗಳನ್ನು ಸಂಧಾನ ಮಾಡಿದರು.

ಮಧ್ಯಾಹ್ನ 12 ಗಂಟೆಯಿಂದ ಆರಂಭವಾದ ಅದಾಲತ್‍ನಲ್ಲಿ ನ್ಯಾಯಿಕ ಸಂಧಾನಕಾರರಾಗಿ ಮತ್ತು 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಚ್ ಅಣ್ಣಯ್ಯನವರ ಮತ್ತು ಸಂಧಾನಕಾರರಾಗಿ ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ ಭಾಗವಹಿಸಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳಾದ ವಿಜಯ ದೇವರಾಜ್ ಅರಸ್ ಮತ್ತು ಸಿಬ್ಬಂದಿಗಳು, ವಕೀಲರು ಉಪಸಿತರಿದ್ದರು.