ಡಿ. 24 ರಂದು ಬೆಳಗಾವಿ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ : ಹಾಗೂ ವಿವಿದ ಪ್ರಕಟಣೆ

0

ಡಿ. 24 ರಂದು ಬೆಳಗಾವಿ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ

ಬೆಳಗಾವಿ, ಡಿ.19 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ 2020-21ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆಯನ್ನು ಡಿಸೆಂಬರ್ 24 ರಂದು ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಈ ಯುವಜನೋತ್ಸವದಲ್ಲಿ 15 ರಿಂದ 29 ವರ್ಷದೊಳಗಿನ ಮುಕ್ತ ಯುವಕ/ ಯುವತಿಯರಿಗಾಗಿ ಜಾನಪದ ನೃತ್ಯ, ಜಾನಪದ ಗೀತೆ, ಏಕಾಂಕ ನಾಟಕ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ವಾದ್ಯ ಸಂಗೀತಗಳಾದ ಸಿತಾರ, ಕೊಳಲು, ವೀಣೆ, ತಬಲಾ, ಮೃದಂಗÀ, ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ನೃತ್ಯಗಳಾದ ಮಣಿಪುರಿ, ಓಡಿಸ್ಸಿ, ಭರತನಾಟ್ಯ, ಕಥಕ್ ಹಾಗೂ ಕೂಚುಪುಡಿ ಮತ್ತು ಆಶುಭಾಷಣ ಸ್ಪರ್ಧೆಗಳನ್ನು ನಡೆಸಲಾಗುವುದು.

ಜಿಲ್ಲೆಯ 15 ರಿಂದ 29 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕ/ ಯುವತಿಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿರುತ್ತದೆ. ಭಾಗವಹಿಸುವ ಸ್ಪರ್ಧಾಳುಗಳು ವಯಸ್ಸಿನ ದೃಢೀಕರಣಕ್ಕಾಗಿ ಆಧಾರ ಗುರುತಿನ ಚೀಟಿ ಅಥವಾ ಶಾಲಾ ದಾಖಲಾತಿ ಹಾಗೂ ಬ್ಯಾಂಕ್ ಪಾಸ್‍ಬುಕ್ ಜೆರಾಕ್ಸ್ ಪ್ರತಿಯೊಂದಿಗೆ ನೇರವಾಗಿ ಡಿಸೆಂಬರ್ 24 ರ ಮುಂಜಾನೆ 9.00 ಗಂಟೆ ಒಳಗಾಗಿ ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲಾ ಸಭಾಂಗಣದಲ್ಲಿ ನೋಂದಣಿ ಮಾಡಿಕೊಳ್ಳುವುದು. ಭಾಗವಹಿಸುವ ಸ್ಪರ್ಧಾಳುಗಳು ಕೋವಿಡ್-19 ನಿಯಮಗಳನ್ನು ಪಾಲಿಸುವುದರೊಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವುದು.

ಭಾಗವಹಿಸುವ ಸ್ಪರ್ಧಾಳುಗಳಿಗೆ ಉಚಿತ ಪ್ರವೇಶವಿದ್ದು, ಬೆಳಗಾವಿ ಹೊರತುಪಡಿಸಿ ಇತರೆ ತಾಲೂಕುಗಳಿಂದ ಬರುವಂತಹ ಸ್ಪಧಾಳುಗಳಿಗೆ ಪ್ರಯಾಣ ಭತ್ಯೆ ಹಾಗೂ ಭಾಗವಹಿಸುವಂತಹ ಎಲ್ಲ ಸ್ಪರ್ಧಾಳುಗಳಿಗೆ ಊಟೋಪಹಾರವನ್ನು ಒದಗಿಸಲಾಗುವುದು. ವಿಜೇತ ಸ್ಪರ್ಧಾಳುಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಬಸವರಾಜ ಜಕ್ಕನ್ನವರ ಇವರ ದೂರವಾಣಿ ಸಂಖ್ಯೆ.: 7411144485 ನ್ನು ಸಂಪರ್ಕಿಸಬಹುದು ಎಂದು ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದರು. ////

ವಿದ್ಯುತ್ ವ್ಯತ್ಯಯ

ಬೆಳಗಾವಿ, ಡಿ.19 : ತುರ್ತು ನಿರ್ವಹಣೆ ಕಾರ್ಯದ ಪ್ರಯುಕ್ತ 33/11 ಕೆವ್ಹಿ ವಿ.ವಿ. ಕೇಂದ್ರ ಆರ್.ಎಮ್.-1 ಉದ್ಯಮಬಾಗ ನಗರದ ಪ್ರದೇಶಗಳಲ್ಲಿ ಭಾನುವಾರ ಡಿಸೆಂಬರ್ 20 ರಂದು ಮುಂಜಾನೆ 09.00 ರಿಂದ ಸಾಯಂಕಾಲ 05.30 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹುವಿಸಕಂನಿ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದರು. ////

ಪಿಂಚಣಿ ಅದಾಲತ್

ಬೆಳಗಾವಿ, ಡಿ.19 : ಗುರುವಾರ ಡಿಸೆಂಬರ್ 17 ರಂದು ಜಿಲ್ಲಾ ಖಜಾನೆ ಪಿಂಚಣಿ ಅದಾಲತ್‍ನ್ನು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಸರ್ಕಾರವು ಪಿಂಚಣಿ ಸಂದಾಯ ಮಾಡುವ ಬ್ಯಾಂಕ್‍ಗಳ ಸಂಖ್ಯೆಯನ್ನು ನಾಲ್ಕು ಬ್ಯಾಂಕ್‍ಗಳಿಗೆ ಸೀಮಿತಗೊಳಿಸಿದ್ದು ಅವುಗಳೆಂದರೆ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ , ಕೆನರಾ ಬ್ಯಾಂಕ್ , ಯೂನಿಯನ್, ಬ್ಯಾಂಕ್ ಆಫ್ ಬರೋಡಾ ಆಗಿದ್ದು ಈ ಬ್ಯಾಂಕ್‍ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್‍ಗಳಲ್ಲಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಈ ನಾಲ್ಕು ಬ್ಯಾಂಕ್‍ಗಳಿಗೆ ವರ್ಗಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಖಜಾನೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///