ರೈತರ ದಿನಾಚರಣೆ ಕಾರ್ಯಕ್ರಮ ಡಿ.23 ರಂದು

0

ರೈತರ ದಿನಾಚರಣೆ ಕಾರ್ಯಕ್ರಮ ಡಿ.23 ರಂದ
ಬೆಳಗಾವಿ, ಡಿ.22 : ಭಾರತೀಯ ಸ್ಟೇಟ್ ಬ್ಯಾಂಕ್ ಹಣಕಾಸು ಸೇರ್ಪಡೆ ಮತ್ತು ಕಿರು ಮಾರುಕಟ್ಟೆ ವಿಭಾಗದ ವತಿಯಿಂದ ಬುಧವಾರ(ಡಿ.23) ಬೆಳಿಗ್ಗೆ 10 ಗಂಟೆಗೆ ನಗರದ ಕೃಷಿ ಇಲಾಖೆಯ ಸಭಾ ಭವನದಲ್ಲಿ ರೈತರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರಾದ ಜಿ. ನರಸಿಂಹ ಮೂರ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ ಎಚ್. ವಿ. ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರವೀಂದ್ರ ಬಿ. ಹಕಾಟಿ ಮತ್ತು ಕೃಷಿ ಇಲಾಖೆಯ ಉಪನಿರ್ದೇಶಕರಾದ ಎಚ್. ಡಿ. ಕೋಳೇಕರ ಅವರು ಉಪಸ್ಥಿತರಿರುವರು ಎಂದು ಜಿಲ್ಲಾ ಮಾರುಕಟ್ಟೆ ಕೇಂದ್ರ -2 ಮುಖ್ಯ ವ್ಯವಸ್ಥಾಪಕರು ಗುರುಪ್ರಸಾದ್ ಕಾಮತ್ ಮತ್ತು ಕೃಷಿ ಅಭಿವೃದ್ಧಿ ಶಾಖೆಯ ಶಾಖಾ ವ್ಯವಸ್ಥಾಪಕರು ಪುಷ್ಪರಾಮ್ ಗಣೇಶ್ ಅವರು ತಿಳಿಸಿದ್ದಾರೆ.