ಬೆಳಗಾವಿ ನಗರದ ಕಿಲ್ಲಾ ಕೆರೆಯನ್ನು ಪ್ರೇಕ್ಷಣಿಯ ಸ್ಥಳವನ್ನಾಗಿಸಲು ಶಾಸಕ ಅನಿಲ ಬೆನಕೆ ಸನ್ನಧ್ಧ

0

ಬೆಳಗಾವಿ, ಇಂದು ಬೆಳಗಾವಿಯ ಕಿಲ್ಲಾ ಕೆರೆಯಲ್ಲಿ ಮುಂಜಾನೆ ವಾಯು ವಿಹಾರದಲ್ಲಿ ನಾಗರೀಕರೊಂದಿಗೆ ಶಾಸಕ ಅನಿಲ ಬೆನಕೆ ಮುಂಬರುವ ದಿನಗಳಲ್ಲಿ ಕಿಲ್ಲಾ ಕೆರೆಯ ಸರ್ವಾಂಗಿಣ ಅಭಿವೃದ್ಧಿ ಮತ್ತು ಉದ್ಯಾನವನದ ಅಭಿವೃದ್ಧಿಗಾಗಿ ಸ್ಥಳಿಯ ನಾಗರೀಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಮಾತನಾಡುತ್ತ ಬೆಳಗಾವಿಯ ಪ್ರವೇಶದ್ವಾರವಾದ ಸುಪ್ರಸಿದ್ಧ ಕಿಲ್ಲಾ ಕೆರೆಯನ್ನು ಒಂದು ಪ್ರೇಕ್ಷಣಿಯ ಸ್ಥಳವನ್ನಾಗಿಸಲು ಸ್ಥಳಿಯ ನಾಗರೀಕರು, ಕಾರ್ಯಕರ್ತರು ಹಾಗೂ ಸ್ಮಾರ್ಟಸಿಟಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ, ಸದ್ಯದಲ್ಲೆ ಉತ್ತಮದರ್ಜೆಯ ಇಂಜಿನಿಯರಗಳೊಂದಿಗೆ ಚರ್ಚಿಸಿ ರೂಪರೇಷೆ ತಯಾರಿಸಿ ಕಿಲ್ಲಾ ಕೆರೆಯನ್ನು ಪ್ರೇಕ್ಷಣಿಯ ಸ್ಥಳವನ್ನಾಗಿ ಮಾರ್ಪಡಿಸಲು ಕ್ರಮಕೈಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸ್ಥಳಿಯ ನಾಗರೀಕರು, ಕಾರ್ಯಕರ್ತರು, ಸ್ಮಾರ್ಟಸಿಟಿ ಅಧಿಕಾರಿಗಳು ಹಾಗೂ ಮಹಾನಗರಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.////