ರಿವಾಲ್ವಾರ್ ತಂದಿದ್ದ ಮತಗಟ್ಟೆ ಅಧಿಕಾರಿ ಬದಲು

0

ಬೆಳಗಾವಿ, ಡಿ. 22- ತಾಲ್ಲೂಕಿನ ದೇಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಗೊಂಡ ಅಧಿಕಾರಿಯು ತನ್ನ ಜೊತೆಯಲ್ಲಿ ರಿವಾಲ್ವರ್ ತಂದಿದ್ದು ಸೋಮವಾರ ಪತ್ತೆಯಾಗಿದೆ.

ಸುಲೇಮಾನ್ ಸನದಿ ಎನ್ನುವವರು ಪಿಸ್ತೂಲ್ ತಂದಿದ್ದರು. ಅಧಿಕಾರಿ ಬಳಿ ಲೋಡೆಡ್ ಪಿಸ್ತೂಲ್ ಇರುವುದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೇಂದ್ರಕ್ಕೆ ತೆರಳಿದ ಹಿರಿಯ ಪೋಲಿಸ್ ಅಧಿಕಾರಿಗಳು ಪಿಸ್ತೂಲ್ ನಲ್ಲಿ ತುಂಬಲಾಗಿದ್ದ ಗುಂಡುಗಳನ್ನು ಹೊರಗೆ ತೆಗೆಯುವಂತೆ ತಿಳಿಸಿದ್ದಾರೆ.

ಪಿಸ್ತೂಲ್ ಅನ್ನು ಕರ್ತವ್ಯದ ಸಮಯದಲ್ಲಿ ತನ್ನೊಂದಿಗೆ ತರಲು ಕಾರಣವೇನು ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯನ್ನು ಪರಿಶೀಲಿಸಲಾಯಿತು. ಕ್ರೇಜ್‌ಗಾಗಿ ಪಿಸ್ತೂಲ್ ತಂದಿದ್ದೆ ಎಂದು ಅವರು ತಿಳಿಸಿದರು. ಕೊನೆಗೆ ಅವರನ್ನು ಆ ಕೆಲಸದಿಂದ ಬಿಡುಗಡೆ ಮಾಡಿ ಬೇರೆಯವರನ್ನು ನಿಯೋಜಿಸಲಾಗಿದೆ. ರಿವಾಲ್ವಾರ್ ಹೊಂದಲು ಅವರು ಪರವಾನಗಿ ಹೊಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.