ಚಿಣ್ಣರ ಚಿಗುರು ಕಾರ್ಯಕ್ರಮ

0
 • ಚಿಣ್ಣರ ಚಿಗುರು ಕಾರ್ಯಕ್ರಮ

 • ಬೆಳಗಾವಿ, ಡಿ.24 : ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಚಿಣ್ಣರ ಹಬ್ಬ ಚಿಗುರು ಕಾರ್ಯಕ್ರಮವನ್ನು (ಡಿ.26) ಶನಿವಾರ ಬೆಳಿಗ್ಗೆ 11 ಗಂಟೆಗೆ ಬಸವರಾಜ ಕಟ್ಟೀಮನಿ ಸಭಾ ಭವನದಲ್ಲಿ ಆಯೋಜಿಸಲಾಗಿದೆ.
  ಜಲಸಂಪೂನ್ಮೂಲ ಸಚಿವರಾದ ಶಶಿಕಲಾ ಅ. ಜೊಲ್ಲೆ ಮತ್ತು ಕೈ ಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಶ್ರೀಮಂತ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕರು ಅನಿಲ ಎಸ್. ಬೆನಕೆ ಅಧ್ಯಕ್ಷತೆ ವಹಿಸಲಿದ್ದಾರೆ.
  ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಇಲಾಖೆ ಸಚಿವರು ಲಕ್ಷ್ಮಣ ಸಂ. ಸವದಿ ಅವರು ಘನ ಉಪಸ್ಥಿತರಿರುವರು.
  ಕರ್ನಾಟಕ ವಿಧಾನ ಪರಿಷತ್ತು ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ, ಕರ್ನಾಟಕ ವಿಧಾನ ಸಭೆ ಉಪ ಸಭಾಧ್ಯಕ್ಷರಾದ ವಿಶ್ವನಾಥ ಚ. ಮಾಮನಿ, ನವದೆಹಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾದ ಶಂಕರಗೌಡ ಐ. ಪಾಟೀಲ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆಶಾ ಐಹೊಳೆ, ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಶಾಸಕರಾದ ಪಿ. ರಾಜೀವ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಶಾಸಕರಾದ ಮಹೇಶ ಕಮಠಳ್ಳಿ ವಿಶೇಷ ಉಪಸ್ಥಿತರಿರುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ತಿಳಿಸಿದರು.///
 • ಎರಡು ವರ್ಷದ ಅವಧಿಯ ಎಂ.ಟೆಕ್ ಇನ್‍ಟೂಲ್ ಇಂಜಿನೀಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ

 • ಬೆಳಗಾವಿ, ಡಿ.24: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಮೈಸೂರು ಇಲ್ಲಿ 2020-21ನೇ ಸಾಲಿನ ಎಂ.ಟೆಕ್ ಇನ್‍ಟೂಲ್ ಇಂಜೀನಿಯರಿಂಗ್ ಕೋರ್ಸಗಾಗಿ Pಉಅಇಖಿ ಬರೆದ ಬಿ.ಇ., – ಮೆಕ್ಯಾನಿಕಲ್/ ಇಂಡಸ್ಟ್ರೀಯಲ್ ಪ್ರೋಡಕ್ಷನ್/ ಆಟೋ ಮೊಬೈಲ್/ ಮೇರಿನ್/ ಆಟೋಮೇಷನ್ ಮತ್ತು ರೋಬೋಟಿಕ್ಸ್ ಇಂಜಿನಿಯರಿಂಗ್ ಮುಂತಾದವುಗಳÀಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಎ.ಐ.ಸಿ.ಟಿ.ಇ ಮತ್ತು ವಿ.ಟಿ.ಯು ಇಂದ ಅನುಮೋದನೆ ಪಡೆದ ಎರಡು ವರ್ಷ ಅವಧಿಯ ಎಂ.ಟೆಕ್ ಇನ್‍ಟೂಲ್ ಇಂಜಿನೀಯರಿಂಗ್ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
  ಜಿಟಿಟಿಸಿಯಲ್ಲಿ ನೀಡುವ ತರಬೇತಿಯು ಬೇರೆ ಸಾಂಪ್ರದಾಯಿಕ ತರಬೇತಿಗಿಂತ ಭಿನ್ನವಾಗಿದ್ದು ಪ್ರಾಯೋಗಿಕ ತರಬೇತಿ ಪಡೆಯುವುದಲ್ಲದೆ ದಿನದಿಂದ ದಿನಕ್ಕೆ ಬದಲಾಗುವ ತಂತ್ರಜ್ಞಾನದಲ್ಲಿ ಪರಿಣಿತಿ ಮತ್ತು ಅನುಭವ ಪಡೆಯಲು ಸಾಧ್ಯವಾಗಿರುತ್ತದೆ. ಈ ಸಂಸ್ಥೆಯಲ್ಲಿ ಕೈಗಾರಿಕಾ ಘಟಕ ವಿರುವುದರಿಂದ ವಿದ್ಯಾರ್ಥಿಗಳಿಗೆ ಸಿಎನ್‍ಸಿ ಯಂತ್ರದಲ್ಲಿ ಕೆಲಸ ಮಾಡÀಬಹುದಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ನಿಯಮಿತ ಬೋಧನಾ ಚಟುವಟಿಕೆಗಳ ಜೊತೆಗೆ ಕೈಗಾರಿಕೆಯ ಅನುಭವ ದೊರೆಯುವುದು.
  ಈ ಸಂಸ್ಥೆಯಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಸ್ವಉದ್ಯೋಗಿ/ ಉದ್ಯೋಗಿಯಾಗಲು ನಮ್ಮ ಶಿಕ್ಷಣ ಸಹಕಾರಿಯಾಗುತ್ತದೆ ಮತ್ತು ಹೆಸರಾಂತ ಕೈಗಾರಿಕೆಗಳಲ್ಲಿ ಅತ್ಯುತ್ತಮವಾದ ಉದ್ಯೋಗಾವಕಾಶಗಳು ಲಭ್ಯವಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ದೇಶÀ, ವಿದೇಶದ ವಿವಿಧ ಕೈಗಾರಿಕೆಗಳಲ್ಲಿ ಬಹಳ ಬೇಡಿಕೆ ಇದೆ. ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಇನ್ಫೋಸಿಸ್, ಟಿ.ಸಿ.ಎಸ್, ಬೋಷ್, ಟೋಯೊಟಾ ಮುಂತಾದ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯ ವತಿಯಿಂದ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗುವುದು.

  ಹೆಚ್ಚಿನ ಮಾಹಿತಿಗಾಗಿ ಸರ್ಕಾರಿಉಪಕರಣಾಗಾರ ಮತ್ತುತರಬೇತಿಕೇಂದ್ರ, ಪ್ಲಾಟ್ ನಂ. 93 ಮತ್ತು 94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್ ರಸ್ತೆ, ಮೈಸೂರು- 16. ಮೊಬೈಲ್ ನಂ : 9243989954 ಅನ್ನು ಸಂರ್ಪಕಿಸಿ ಎಂದು ಜಿ.ಟಿ.ಟಿ.ಸಿ ಪ್ರಾಂಶುಪಾಲರು ತಿಳಿಸಿದ್ದಾರೆ./////

 • ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ವಿತರಣೆ

 • ಬೆಳಗಾವಿ, ಡಿ.24 : ಸಾರಿಗೆ ಇಲಾಖೆ 2020 ನೇ ಸಾಲಿನಲ್ಲಿ ಚಾಲ್ತಿ ಪಾಸ್ ಹೊಂದಿರುವ ಅರ್ಹ ವಿಕಲಚೇತನರ ರಿಯಾಯಿತಿ ದರದ ಪಾಸುಗಳನ್ನು ಚಿಕ್ಕೋಡಿ ಸಂಕೇಶ್ವರ ಗೋಕಾಕ ರಾಯಬಾಗ ಮತ್ತು ಅಥಣಿ ಕೌಂಟರಗಳಲ್ಲಿ ಪಾಸುಗಳನ್ನು ಫೆಬ್ರುವರಿ-2021 ರ ಕೊನೆಯ ವಾರದವರೆಗು ನವೀಕರಿಸಲಾಗುವುದು.
  ವಿಕಲಚೇತನರು ಪಾಸು ನವೀಕರಿಸಲು ಡಿಸೆಂಬರ್ 26 2020 ರಿಂದ ಫೆಬ್ರುವರಿ 28 2020 ರ ಒಳಗಾಗಿ ನಗದು ರೂಪದಲ್ಲಿ 660 ರೂಪಾಯಿ ನವೀಕರಣ ಶುಲ್ಕ ಪಾವತಿಸಬೇಕು. 2020 ರಲ್ಲಿ ವಿತರಿಸಿದ ಬಸ್ ಪಾಸುಗಳನ್ನು ಫೆಬ್ರುವರಿ 28 2021 ರವರೆಗೆ ಮಾನ್ಯ ಮಾಡಲಾಗಿದೆ. ನಿಗದಿತ ಅವಧಿ ಮುಗಿಯುವ ಒಳಗಾಗಿ ಎಲ್ಲ ಫಲಾನುಭವಿಗಳು ತಮ್ಮ ಪಾಸುಗಳನ್ನು ನವೀಕರಿಸಿಕೊಳ್ಳಬೇಕು, ತಡವಾಗಿ ಬಂದ ಪಾಸುಗಳನ್ನು ನವೀಕರಿಸಲಾಗುವುದಿಲ್ಲ ಎಂದು ವಾ.ಕ.ರ.ಸಾ.ಸಂಸ್ಥೆ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  ಸರ್ಕಾರದ ಆದೇಶದಂತೆ ಸೇವಾಸಿಂಧುವಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಮಾತ್ರ ವಿಕಲಚೇತನರ ರಿಯಾಯಿತಿ ಬಸ್ ಪಾಸುಗಳನ್ನು ವಿತರಿಸಲಾಗುವುದು. ಅರ್ಜಿಗಳನ್ನು ವೆಬ್‍ಸೈಟ್  http://njn.karnatakadht.org/weavers/ej-2loom-applyನಲ್ಲಿ ನಮೂದಿಸಲಾಗಿದೆ.
  ವಿಕಲಚೇತನರು ಹೊಸದಾಗಿ 2021 ನೇ ಸಾಲಿನಲ್ಲಿ ಪಾಸುಗಳನ್ನು ಒದಗಿಸಲು ಸಹ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ಪಾಸು ಪಡೆಯಲು ಯಾವುದೇ ಕಾಲಮಿತಿ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ////
 • ರೇಣುಕಾ ಯಲ್ಲಮ್ಮಾ ದೇವಸ್ಥಾನ ಡಿಸೆಂಬರ್ 31 ರವರೆಗೆ ಸಾರ್ವಜನಿಕ ಭಕ್ತರ ಪ್ರವೇಶಕ್ಕೆ ನಿರ್ಬಂಧ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ

 • ಬೆಳಗಾವಿ, ಡಿ.24: ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡ ಶ್ರೀ ರೇಣುಕಾದೇವಿ ದೇವಸ್ಥಾನದಲ್ಲಿ ಸಾರ್ವಜನಿಕ ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ -19 ಕರೋನಾ ವೈರಾಣು ಹರಡುವಿಕೆಯನ್ನು ನಿಯಂತ್ರಿಸುವ ಕುರಿತು ಮುಂಜಾಗೃತಾ ಕ್ರಮವಾಗಿ ಡಿಸೆಂಬರ್ 30 ರಂದು ಹೊಸ್ತಿಲ ಹುಣ್ಣಿಮೆ ಜಾತ್ರೆ ಇರುವುದರಿಂದ ಸಾರ್ವಜನಿಕ ಭಕ್ತಾದಿಗಳ ದರ್ಶನವನ್ನು ಡಿಸೆಂಬರ್ 31 ರವರೆಗೆ ನಿಷೇಧಿಸಿ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆದೇಶ ಹೊರಡಿಸಿದ್ದಾರೆ.
  ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144ರಡಿ ಡಿಸೆಂಬರ್ 31 ರವರೆಗೆ ಪ್ರತಿ ವರ್ಷದಂತೆ ಹಮ್ಮಿಕೊಳ್ಳಲಾಗುವ ಹೊಸ್ತಿಲ ಹುಣ್ಣಿಮೆ ಜಾತ್ರಾ ಮಹೋತ್ಸವವನ್ನು ಸಾರ್ವಜನಿಕ ಭಕ್ತಾದಿಗಳ ಪಾಲ್ಗೋಳ್ಳುವಿಕೆಯನ್ನು ನಿರ್ಬಂಧಿಸಿ, ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲು ನಿರ್ಣಯಿಸಲಾಗಿದೆ. ಸಾರ್ವಜನಿಕರ ಭಕ್ತಾಧಿಗಳು ಸಹಕರಿಸಲು ತಿಳಿಸಲಾಗಿದೆ.

   

 • ಅರ್ಜಿ ಅಹ್ವಾನ

 • ಬೆಳಗಾವಿ, ಡಿ.24 : ಕೈಮಗ್ಗ ಮತ್ತು ಜವಳಿ ಇಲಾಖೆ ಕಚೇರಿಯಿಂದ 2020-21ನೇ ಸಾಲಿಗೆ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಫಲಾನುಭವಿಗಳಿಗಾಗಿ ವಿಶೇಷ ಘಟಕ ಯೋಜನೆಯಡಿ ಘಟಕ ವೆಚ್ಚ ರೂ.3.00 ಲಕ್ಷಗಳಿಗೆ ಶೇ.90 ರಷ್ಟು ಸಹಾಯಧನದಲ್ಲಿ 02 ವಿದ್ಯತ್ ಮಗ್ಗ ಮತ್ತು 400 ಹುಕ್ಸ್‍ಗಳ ಜಕಾರ್ಡ್/40 ಕೋಲಿನ ಡಾಬಿ ಖರೀದಿಸಲು ಅರ್ಜಿ ಆಹ್ವಾನಿಸಲಾಗಿದೆ.
  ವಿದ್ಯುತ್ ಮಗ್ಗ ನೇಕಾರಿಕೆಯಲ್ಲಿ ತರಬೇತಿ ಹಾಗೂ ಅನುಭವ ಹೊಂದಿದ ಆಸಕ್ತ ಪರಿಶಿಷ್ಟ ಜಾತಿಯ ಫಲಾನುಭವಿಗಳು ಇಲಾಖೆಯ ವೆಬ್‍ಪೊರ್ಟಲ್ http://njn.karnatakadht.org/weavers/ej-2loom-apply ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ,

  ಹೆಚ್ಚಿನ ಮಾಹಿತಿಗಾಗಿ ಅರ್ಜಿಯೊಂದಿಗೆ ದಾಖಲಾತಿಗಳನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ಕಚೇರಿಗೆ (ಜ.2) ರೊಳಗಾಗಿ ಸಲ್ಲಿಸುವುದು ದೂರವಾಣಿ ಸಂಖ್ಯೆ: 0831-2950674 ಗೆ ಸಂಪರ್ಕಿಸಿ ಎಂದು ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////