ಯೋಧನಿಂದ ಪತ್ನಿ, ಅತ್ತೆ, ಮಾವನ ಮೇಲೆ ಹಲ್ಲೆ….

0

ಬೆಳಗಾವಿ , ಡಿ. 24- ಮಧ್ಯರಾತ್ರಿ ಕುಡಿದು ಮತ್ತಿನಲ್ಲಿ ಯೋಧನೊಬ್ಬ ಪತ್ನಿ ತವರು ಮನೆಗೆ ನುಗ್ಗಿ ಪತ್ನಿ, ಅತ್ತೆ ಹಾಗೂ ಮಾವನ ಮೇಲೆ ಕೂಡು ಗೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಹೇಮಂತಕುಮಾರ ವಿಠ್ಠಲ ರಂಗಾಣಿ (26) ಹಲ್ಲೆ ನಡೆಸಿರುವ ಯೋಧ ಆಗಿದ್ದು, ಕಳೆದ 10 ತಿಂಗಳ ಹಿಂದೆ ಕೊಂಡಸಕೊಪ್ಪ ಗ್ರಾಮದ ದೀಪಾ ಲಕ್ಷ್ಮಣ ದೇಸಾಯಿ (21) ಜೊತೆ ವಿವಾಹವಾಗಿದ್ದ. ಕೆಲ ದಿನಗಳ ಬಳಿಕ ಕುಡಿದು ಹೆಂಡತಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದ ಬೇಸತ್ತಿದ್ದ ದೀಪಾ ಅತ್ತೆ ಮಾವಗೆ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ.. ಎಲ್ಲವನೂ ಸಹಿಸುತ್ತ ಕೊನೆಗೆ ಬೇಸತ್ತು ಬಂದಿದ್ದಾಗಿ ಪೊಲೀಸರ ಮುಂದೆ ಪತ್ನಿ ಹೇಳಿದ್ದಾಗಿ ತಿಳಿದು ಬಂದಿದೆ.

ಗಂಡ ಹೇಮಂತಕುಮಾರ ರಜೆ ಮುಗಿಸಿ ಕೆಲಸಕ್ಕೆ ತೆರಳಿದ ಮೇಲೆ ದೀಪಾ ಇತ್ತೀಚಿಗಷ್ಟೆ ದೀಪಾವಳಿ ನಿಮಿತ್ತ ತವರು ಮನೆಗೆ ಬಂದಿದ್ದಳು. ಮೊನ್ನೆ ಮತ್ತೆ ರಜೆ ಮೇಲೆ ಬಂದ ಯೋಧ ಹೇಮಂತಕುಮಾರ ಮಂಗಳವಾರ ಬೆಳಗ್ಗೆ 1.30 ಕ್ಕೆ ಕುಡಿದ ಮತ್ತಿನಲ್ಲಿ ಕೊಂಡಸಕೊಪ್ಪ ಗ್ರಾಮ ದಲ್ಲಿರುವ ಹೆಂಡತಿ ಮನೆಗೆ ಹೋಗಿದ್ದಾನೆ. ನನ್ನ ಪತ್ನಿಯನ್ನು ನನ್ನ ಜೊತೆ ಕಳುಹಿಸಿ ಕೊಡಿ ಅಂತಾ ಹಠ ಹಿಡಿದಿದ್ದಾನೆ. ಈಗ ಕತ್ತಲಾಗಿದೆ ನಾಳೆ ಬೆಳಗ್ಗೆ ಕರೆದುಕೊಂಡು ಹೋಗು ಅಂತಾ ಅತ್ತೆ ಮಾವ ಹೇಳಿದ್ದಾರೆ. ಇದಕ್ಕೆ ನಶೆಯಲ್ಲಿದ್ದ ಇತ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲಿದ್ದ ಕೂಡು ಗೊಲಿನಿಂದ ಅತ್ತೆಯ ತಲೆಗೆ ಹೋಡೆದಿದ್ದಾನೆ. ಬಿಡಿಸಲು ಬಂದ ಪತ್ನಿ ಹಾಗೂ ಮಾವನ ಮೇಲೆ ಹಲ್ಲೆ ನಡೆಸಿದ್ದಾನೆ.

ಅಷ್ಟರಲ್ಲಿ ಕೂಗಾಟ ಕೇಳಿ ಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಅವರನ್ನು ಕಂಡು ಯೋಧ ತನ್ನ ವಾಹನವನ್ನು ಬಿಟ್ಟು ಪರಾರಿಯಾಗಲು ಪ್ರಯತ್ನಿದ್ದ. ಆದರೆ ಅಷ್ಟ ರೊಳಗೆ ಮಾಹಿತಿ ಪಡೆದ ಹಿರೇಬಾಗೇವಾಡಿ ಪಿಐ ವಿಜಯಕುಮಾರ ಸಿನ್ನೂರ ಯೋಧನನ್ನು ವಶಕ್ಕೆ ಪಡೆದಿದ್ದರು. ಆದರೆ ಆತ ಹಲ್ಲೆ ನೇಪ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಪರಾರಿಯಾಗಿದ್ದಾಗಿ ತಿಳಿದು ಬಂದಿದೆ.

ಘಟನೆ ಸಂಬಂಧಿಸಿದಂತೆ ಆರೋಪಿ ಯೋಧ ಹೇಮಂತಕುಮಾರ ವಿರುದ್ಧ (IPC 307) ಕೊಲೆ ಯತ್ನ ಹಾಗೂ ಆತನ ತಂದೆ ವಿಠ್ಠಲ ರಂಗಾಣಿ, ತಾಯಿ ಜಯಶ್ರೀ ರಂಗಾಣಿ ಮೇಲೆ ದೀಪಾಳಿಗೆ ಕಿರುಕುಳ ಸೇರಿದಂತೆ ಹಲವು ಆರೋಪದಡಿ ಹೀರೆಬಾಗೇವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಯೋಧನಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ.. ಮಿಲಿಟರಿ ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ಅವನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ವಿಕ್ರಂ ಆಮಟೆ ತಿಳಿಸಿದ್ದಾರೆ.