ಇಂಧನ ದಕ್ಷತೆ ಮತ್ತು ಸಂರಕ್ಷಣೆಯ ಕುರಿತು ಜಾಗೃತಿ ಜಾಥಾ

0

 

ಬೆಳಗಾವಿ: ಹಿರಾಶುಗರ ತಾಂತ್ರಿಕ ಮಹಾವಿದ್ಯಾಲಯವು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಸಹಯೋಗದೊಂದಿಗೆ ರಾಷ್ತ್ರಿಯ ಇಂಧನ ಸಂರಕ್ಷಣಾ ಸಪ್ತಾಹದ ಅಂಗವಾಗಿ ಇಂಧನ ದಕ್ಷತೆ ಮತ್ತು ಸಂರಕ್ಷಣೆಯ ಕುರಿತು ಜನಜಾಗೃತಿ ಜಾಥಾವನ್ನು 24 ರಂದು ಗುರುವಾರ ಮಹಾವಿದ್ಯಾಲಯದಿಂದ ನಿಡಸೋಶಿ ಗ್ರಾಮದ ಮೂಲಕ ಸಾಗಿ ಶ್ರೀಮಠಕ್ಕೆ ತಲುಪಿತು.
ಇದರ ಅಂಗವಾಗಿ ಇಂಧನ ದಕ್ಷತೆ ಮತ್ತು ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ನಿಡಸೋಶಿ ಗ್ರಾಮದ ಶ್ರೀ ದುರಡುಂಡಿಶ್ವರ ಸಿದ್ಧಸಂಸ್ಥಾನ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಬಸವರಾಜ ಪುಜೇರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಕೆಪಿಟಿಸಿಎಲ್ ಚಿಕ್ಕೋಡಿ, ಇವರು ಇಔಧನದ ಮಹತ್ವ ಹಾಗೂ ಸರಕಾರದ ವಿವಿಧ ಇಔಧನ ಉಳಿತಾಯ ಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಸ. ಸಿ. ಕಮತೆ ಐಇಆ ವಿದ್ಯುತ್ ದೀಪ ಉಪಯೋಗಿಸಿ ವಿದ್ಯುತ್ ಉಳಿಸಲು ಪ್ರೆರೇಪಿಸಿದರು.
ಕಾರ್ಯಕ್ರಮದ ದಿವ್ಯಸಾನಿದ್ಧ್ಯ ವಹಿಸಿ ಆಶೀರ್ವದಿಸಿದ ಸಿದ್ಧಸಂಸ್ಥಾನ ಮಠ ನಿಡಸೋಶಿಯ ಜಗದ್ಗುರು ಶ್ರೀ ಪಂಚಮ ಶಿವಲಿಂಗೆಶ್ವರ ಮಹಾಸ್ವಾಮಿಗಳು, ಇಔಧನ ಮಿತವಾಗಿ ಬಳಸುವ ಮುಖಾಂತರ ಮಾಲಿನ್ಯವನ್ನು ಕಡಿಮೆಗೊಳಿಸಿ ಪರಿಸರ ಸಂರಕ್ಷಣೆ ಮಾಡುವ ಹೊಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರು ಹಾಗೂ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರು ಡಾ. ಬಸವರಾಜ ಮಾದಿಗ್ಗೊಂಡ ಪ್ರಾಸ್ತಾವಿಕ ಭಾಷಣದಲ್ಲಿ ಜಾಗತಿಕ ಮಟ್ಟದ ಇಔಧನ ದುರ್ಬಳಕೆಯಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನೂ ಅಂಕಿ ಅಂಶಗಳ ಮುಖಾಂತರ ವಿವರಿಸಿದರು. ಪೆÇ್ರ. ಸುಜಾತಾ ಹುದ್ದಾರ ನಿರೂಪಿಸಿದರು.