ಚವ್ವಾಟ ಗಲ್ಲಿಯಲ್ಲಿ ಕಿಲ್ಲಾ ಪ್ರವಾಸಕ್ಕೆ ತೆರಳುವ ಯುವಕರಿಗೆ ಶುಭ ಕೋರಿದ ಶಾಸಕ ಅನಿಲ ಬೆನಕೆ :

0

ಬೆಳಗಾವಿ  ಇಂದು ಶಾಸಕ ಅನಿಲ ಬೆನಕೆರವರು ನಗರದ ಚವ್ವಾಟ ಗಲ್ಲಿಯ 60 ಜನ ಯುವಕರು ಛತ್ರಪತಿ ಶಿವಾಜಿ ಮಹಾರಾಜರ ಕಿಲ್ಲೆಗಳಾದ ಸಂದನ ದರಿ, ಹರಿಷ್ಚಂದ್ರ ಗಡ, ಬೈರವ ಗಡ, ಜೀವದನ ಹಾಗೂ ನಾನೇಘಾಟ ಗಳಿಗೆ ಪ್ರವಾಸಕ್ಕೆ ತೆರಳುತ್ತಿರುವುದರಿಂದ ಅವರಿಗೆ ಶುಭಾಷಯವನ್ನು ಕೋರಿದರು. 

ಛತ್ರಪತಿ ಶಿವಾಜಿ ಮಹಾರಾಜರ ಗತವೈಭವವನ್ನು ಸಾರುವ ಕಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವುದರಿಂದ ಯುವಕರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ಮತ್ತು ಹಿಂದೂ ಸಂಸ್ಕøತಿಯ ಬಗ್ಗೆ ತಿಳಿಯುವ ಸಲುವಾಗಿ ಪ್ರವಾಕ್ಕೆ ತೆರಳುತ್ತಿರುವ ಯುವಕರು ಕಿಲ್ಲೆಗಳಿಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ಮಾಡಿಕೊಳ್ಳದೇ ಕಿಲ್ಲೆಗಳ ಇತಿಹಾಸಗಳನ್ನು ಅರಿಯಬೇಕು ಎಂದು ಯುವಕರಿಗೆ ತಿಳಿಸಿದರು. ಎಲ್ಲ ಯುವಕರು ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿ ಅವರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಹಾಗೂ ಕಿಲ್ಲಾ ಪ್ರವಾಸಿಗರಾದ ನಿಖಿಲ ಪಾಟೀಲ, ಶ್ರೀನಾಥ ಪವಾರ, ಸೌರಭ ಭಾಮನೆ, ಪ್ರಿಯೇಶ ಗೌಂಡವಾಡಕರ ಹಾಗೂ ಇತರ ಶಿವಭಕ್ತರು ಉಪಸ್ಥಿತರಿದ್ದರು.