ಸಾಲಹಳ್ಳಿ ಗ್ರಾಮ ಪಂಚಾಯಿತಿಯ ವಾರ್ಡ್‌ ನಂ. 6ರಲ್ಲಿ ಅಭ್ಯರ್ಥಿಯೊಬ್ಬರಿಗೆ ನೀಡಿದ ಚಿಹ್ನೆಯು ತಪ್ಪಾಗಿ ಮುದ್ರಿತಗೊಂಡಿದ್ದರಿಂದ ಆ ಕ್ಷೇತ್ರದಲ್ಲಿ ಮತದಾನವನ್ನು ಮುಂದೂಡಲಾಗಿದೆ.

0

ಬೆಳಗಾವಿ, ಡಿ. 27- ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಗ್ರಾಮ ಪಂಚಾಯಿತಿಯ ವಾರ್ಡ್‌ ನಂ. 6ರಲ್ಲಿ ಅಭ್ಯರ್ಥಿಯೊಬ್ಬರಿಗೆ ನೀಡಿದ ಚಿಹ್ನೆಯು ತಪ್ಪಾಗಿ ಮುದ್ರಿತಗೊಂಡಿದ್ದರಿಂದ ಆ ಕ್ಷೇತ್ರದಲ್ಲಿ ಮತದಾನವನ್ನು ಮುಂದೂಡಲಾಗಿದೆ.

ಅಭ್ಯರ್ಥಿ ನಿರ್ಮಲಾ ಖಾನಪೇಟೆ ಅವರಿಗೆ ಬಕೆಟ್ ಚಿಹ್ನೆ ನೀಡಲಾಗಿತ್ತು. ಆದರೆ, ಮತಪತ್ರದಲ್ಲಿ ‘ಬೀರು’ವಿನ ಚಿಹ್ನೆ ಮುದ್ರಿಸಲಾಗಿತ್ತು. ಈ ಬಗ್ಗೆ ಅಭ್ಯರ್ಥಿ ಹಾಗೂ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಚುನಾವಣಾ ವಿಭಾಗದ ನಿರ್ಲಕ್ಷ್ಯದ ಬಗ್ಗೆ ಅಭ್ಯರ್ಥಿ ಹಾಗೂ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.

ಆ ವಾರ್ಡ್‌ನಲ್ಲಿ ಒಟ್ಟು 11 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 910 ಮತದಾರರಲ್ಲಿ 14 ಮಂದಿ ಮತ ಚಲಾಯಿಸಿದ್ದರು. ಮತದಾನ ಮುಂದೂಡಿದ್ದಾಗಿ ಪ್ರಕಟಿಸಿದ್ದರಿಂದ, ಸಾಲಿನಲ್ಲಿ ನಿಂತಿದ್ದ ಜನರು ಅಸಮಾಧಾನದಿಂದ ತೆರಳಿದರು.

‘ಚಿಹ್ನೆಯ ವಿಷಯದಲ್ಲಿ ಗೊಂದಲ ಉಂಟಾಗಿರುವುದರಿಂದ ಮತದಾನ ಮುಂದೂಡಲಾಗಿದೆ. ಡಿ. 29ರಂದು ಮರು ಮತದಾನ ಮಾಡಲಾಗು ವುದು’ ಎಂದು ತಹಶೀಲ್ದಾರ್‌ ಗಿರೀಶ್ ಸ್ವಾದಿ ಅವರು ನ್ಯೂಜ್ ೪ ಯು ಸುದ್ದಿವಾಹಿನಿಗೆ ತಿಳಿಸಿದ್ದಾರೆ..