ಮಟಕಾ ಅಡ್ಡೆ ಮೇಲೆ ಡಿಸಿಪಿ ವಿಕ್ರಂ ಆಮಟೆ ಹಾಗೂ ಅಲ್ಲಿನ ಪಿಐ  ದಾಳಿ ನಡೆಸಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಆದರೆ ಅಲ್ಲಿ ಮಾತ್ರ ಮಟಕಾ ದಂಧೆ ನಿಲ್ಲುವಂತೆ ಕಾಣುತ್ತಿಲ್ಲ.

0

ಬೆಳಗಾವಿ :ನಗರದ ಹೃದಯಭಾಗವಾಗಿರುವ ಖಂಜರ ಗಲ್ಲಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮಟಕಾ ಅಡ್ಡೆ ಮೇಲೆ ಡಿಸಿಪಿ ವಿಕ್ರಂ ಆಮಟೆ ಹಾಗೂ ಅಲ್ಲಿನ ಪಿಐ  ಕಳೆದ ಎರಡು ತಿಂಗಳಿನಿಂದ ಹಲವು ಬಾರಿ ದಾಳಿ ನಡೆಸಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಆದರೆ ಅಲ್ಲಿ ಮಾತ್ರ ಮಟಕಾ ದಂಧೆ ನಿಲ್ಲುವಂತೆ ಕಾಣುತ್ತಿಲ್ಲ. ಅಷ್ಟೇ ನಿಷ್ಠುರತೆಯಿಂದ ಡಿಸಿಪಿ ಹಾಗೂ ಮಾರ್ಕೆಟ್ ಪೋಲಿಸರು ಕೂಡ ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿ ಆರೋಪಿಗಳನ್ನ ಹಿಡಿದು ಮಟ್ಟ ಹಾಕುತ್ತಿದ್ದು, ನಿನ್ನೆ ಮತ್ತೆ ಮಟಕಾ ದಂಧೆಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಪರಶುರಾಮ್ ಸಿದ್ರಾಯ  ಬುರುಡ (ವಯಸ್ಸು 40, ಸಾಂಬ್ರಾ ನಿವಾಸಿ), ರಾಜು ಮಾಂಗ್ (ವಯಸ್ಸು 50, ನದಿ ಇಂಗಳಗಾ ನಿವಾಸಿ, ಪ್ರಸ್ತುತ ಖಡಕ್ ಬೀದಿಯಲ್ಲಿ ವಾಸಿಸುತ್ತಿದ್ದಾರೆ), ರಾಜು ಬಳಿರಾಮ ಪಾಟೀಲ (ವಯಸ್ಸು 25, ಚವ್ಹಾಟ ಗಲ್ಲಿ), ರಮೇಶ್ ಲಕ್ಷ್ಮಣ್ ಅಲೋಜಿ (ವಯಸ್ಸು 50 ಅಲತಗಾ)  ಹಾಗೂ ಮೆಹಬೂಬ್ ಬೆಪಾರಿ (ಖಂಜರ್ ಗಲ್ಲಿ ನಿವಾಸಿ). ಐವರು ಬಂಧಿತ ಆರೋಪಿಗಳು. ಅವರಿಂದ 7,313 ರೂ.  ನಗದು, ನೋಟು, ಪೆನ್ನು ಮುಂತಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಪಿಐ ಸಂಗಮೇಶ್ ಶಿವಯೋಗಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಿದ್ದಾರೆ.

ಇನ್ನು ಎ ಪಿ ಎಮ್ ಸಿ ಠಾಣೆಯ ಸುತ್ತಮುತ್ತಲು ಹಾಗೂ ಇರಿಗೇಶನ್ ಕಾಲನಿ ಬದಿಯಲ್ಲಿ ಸಾರ್ವಜನಿಕ ಕಂಗ್ರಾಳಿ ಕೆಎಚ್ ಕೆರೆಯ ಸುತ್ತಮುತ್ತಲು ಇದೇ ರೀತಿ ಅನೈತಿಕ ಚಟುವಟಿಕೆಗಳು ಹಾಗೂ ಜೂಜಾಟ ಜೋರಾಗಿ ನಡೆದಿದೆ.

ಇಲ್ಲಿಯ ಸಾರ್ವಜನಿಕರು ಸ್ಥಳೀಯರು ಹೇಳುವಹಾಗೆ ಇಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿ ಪೊಲೀಸ್ ಕಮಿಷನರ್ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.

ಅದಕ್ಕಾಗಿ ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ಇತ್ತ ಹೆಚ್ಚಿನ ಗಮನಹರಿಸಿ ಜೂಜಾಟ ಮಟಕಾ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲಿ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.