ಪೊಲೀಸ್ ಆಯುಕ್ತರು, ಬೆಳಗಾವಿ ನಗರ ರವರ ಕಾರ್ಯಾಲಯದ                                   ಪ್ರಕಟಣೆ

0

                                ಪ್ರಕಟಣೆ

ಬೆಳಗಾವಿ ತಾಲೂಕಿನ ಗ್ರಾಮ ಪಂಚಾಯತಿಗಳ ಚುನಾವಣೆಯ ಮತ ಎಣಿಕೆ ಕಾರ್ಯವು ದಿನಾಂಕ ಃ 30/12/2020 ರಂದು ನಗರದ ಬಿ.ಕೆ. ಮಾಡೆಲ್ ಹೈಸ್ಕೂಲ್‍ನಲ್ಲಿ ನಡೆಯಲಿದ್ದು, ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ದಿನಾಂಕ: 30/12/2020 ರಂದು 0600 ಗಂಟೆಯಿಂದ ಮತಗಳ ಎಣಿಕೆಯ ಕಾರ್ಯ ಮುಗಿದು, ಮತ ಎಣಿಕೆ ಆಗಮಿಸಿದ ಅಭ್ಯರ್ಥಿ ಹಾಗೂ ಕಾರ್ಯಕರ್ತರು ನಿರ್ಗಮಿಸುವರೆಗೂ ಈ ಕೆಳಗಿನಂತೆ ಚುನಾವಣೆ ಮತ ಎಣಿಕೆ ಕರ್ತವ್ಯದ ಮೇಲಿರುವ ವಾಹನಗಳನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಮಾದರಿಯ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ.

 

ಮಾರ್ಗ ಬದಲಾವಣೆ :

1) ಸದರಿ ದಿನದಂದು ಖಾನಾಪೂರ ಕಡೆಯಿಂದ ಬೆಳಗಾವಿ ನಗರದ ಮೂಲಕ ಸಂಚರಿಸುವ ಎಲ್ಲ ಮಾದರಿಯ ವಾಹನಗಳನ್ನು ಗೋವಾವೇಸ್ ಸರ್ಕಲ್ ಕಡೆಯಿಂದ ಹಾಗೂ ಕಾಂಗ್ರೇಸ್ ರೋಡದಲ್ಲಿಂದ ಸಂಚರಿಸುವ ಹಾಗೂ ಕಾಂಗ್ರೇಸ್ ರಸ್ತೆ ಮೂಲಕ ಸಂಚರಿಸುವ ವಾಹನಗಳು, ಮಿಲ್ಟ್ರಿ ಮಹಾದೇವ ಗುಡಿಯಿಂದ ಎಡ ತಿರುವು ಪಡೆದುಕೊಂಡು ಮಿಲ್ಟ್ರಿ ಏರಿಯಾದಲ್ಲಿಂದ ಶೌರ್ಯ ಸರ್ಕಲ್, ಗಾಂಧಿ ಸರ್ಕಲ್ ಮಾರ್ಗದಲ್ಲಿ ಸಂಚರಿಸುವದು.

2) ಚನ್ನಮ್ಮಾ ಸರ್ಕಲ್ ಕಡೆಯಿಂದ ಖಾನಾಪೂರ ಕಡೆಗೆ ಸಂಚಾರಿಸುವ ಎಲ್ಲ ಮಾದರಿಯ ವಾಹನಗಳನ್ನು ಚನ್ನಮ್ಮಾ ಗಣೇಶ ಗುಡಿಯ ಹತ್ತಿರ ಬಲ ತಿರುವು ಪಡೆದುಕೊಂಡು ಬಾಚಿ ಕ್ರಾಸ್ ಮೂಲಕ ಗಾಂಧಿ ಸರ್ಕಲ್, ಶೌರ್ಯ ಸರ್ಕಲ್ ಮಿಲ್ಟ್ರಿ ಏರಿಯಾದಲ್ಲಿಂದ ಮಿಲ್ಟ್ರಿ ಮಹಾದೇವ ಗುಡಿಯಿಂದ ಕಾಂಗ್ರೇಸ್ ರೋಡ್ ಮೂಲಕ ಸಂಚರಿಸಲು ಅನುಕೂಲ ಮಾಡಿದ್ದು ಇರುತ್ತದೆ.

 

ನಿರ್ಭಂಧಿತ ಮಾರ್ಗಗಳು :

1) ಕಾಲೇಜ ರಸ್ತೆ (ಚನ್ನಮ್ಮಾ ವೃತ್ತ ಗಣೇಶ ಗುಡಿ ಹಿಂಭಾಗದಿಂದ)

2) ಮಂಗಸೂಳಿ ಖೂಟದಿಂದ ಖಾನಾಪೂರ ರಸ್ತೆ ಫಿಶ್ ಮಾರ್ಕೇಟ ಕಡೆಗೆ
3) ಇಂಡೆಪೆಂಟ್ ರಸ್ತೆ, ಸೇಂಟ ಪಾಲ್ ಸ್ಕೂಲ್ ಕ್ರಾಸ್, ಗೌಳಿ ಗಲ್ಲಿ ಕ್ರಾಸ್. ಹೈ ಸ್ಟೀಟ್ ಕ್ರಾಸ್.
4) ಚಿಕ್ಕು ಬಗಿಜಾ ರಸ್ತೆ, (ಗ್ಲೋಬ್ ಸರ್ಕಲ್ ಕಡೆಗೆ ಸಾಗಿದ ರಸ್ತೆ )
5) ಗೋಗಟೆ ಸರ್ಕಲ್ ದಿಂದ (ಖಾನಾಪೂರ ರಸ್ತೆ) ಗ್ಲೋಬ್ ಸರ್ಕಲ್ ಕಡೆಗೆ
6) ಕಾಂಗ್ರೇಸ್ ರಸ್ತೆ. ಮಿಲ್ಟ್ರಿ ಮಹಾದೇವ ಗುಡಿ ಕ್ರಾಸ್.
7) ಅಟಲ್ ಬಿಹಾರಿ ವಾಜಪೇಯಿ ರಸ್ತೆ (ಖಾನಾಪೂರ ರಸ್ತೆ) ಗೋವಾವೇಸ್ ಸರ್ಕಲ್‍ದಿಂದ ಗೋಗಟೆ ಸರ್ಕಲ್ ಕಡೆಗೆ (ಗೂಡಶೇಡ್ ರಸ್ತೆ ಕ್ರಾಸ್ )
8) ರೇಲ್ವೆ ಸೇಷನ್ ರಸ್ತೆ, ಶನಿಮಂದಿರ ಹತ್ತಿರ ಪೋಸ್ಟ ಮೆನ್ ಸರ್ಕಲ್ ಹತ್ತಿರ

ದಿನಾಂಕಃ 30/12/2020 ರಂದು ಚುನಾವಣೆ ಮತ ಎಣಿಕೆ ಕಾಲಕ್ಕೆ ಅಭ್ಯರ್ಥಿಗಳ ಹಾಗೂ ಏಜೆಂಟರುಗಳು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಅಸದಖಾನಾ ದರ್ಗಾದ ಖುಲ್ಲಾ ಜಾಗೆಯಲ್ಲಿ ಮಾಡಿದ್ದು ಇರುತ್ತದೆ.////