ಮೂವರಿಗೆ ರೂಪಾಂತರ ಸೋಂಕು ದೃಢ: ಸಚಿವ ಡಾ.ಸುಧಾಕರ್ ಜ. 1 ರಿಂದ ಶಾಲಾ ಆರಂಭಕ್ಕೆ ತೊಂದರೆ ಇಲ್ಲ!!

0

ಬೆಂಗಳೂರು: ಇಂಗ್ಲೆಂಡ್​ನಲ್ಲಿ ಪತ್ತೆಯಾದ ಮ್ಯೂಟಂಟ್​ ಕೊರೊನಾ ವೈರಸ್​ ಭಾರತಕ್ಕೂ ಕಾಲಿಟ್ಟಿದ್ದು, 6 ಮಂದಿಯಲ್ಲಿ ರೂಪಾಂತರ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಬೆಂಗಳೂರಿನಲ್ಲಿ ಮೂವರಿಗೆ  ವೈರಸ್ ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 10 ಲ್ಯಾಬ್ ಇದೆ. ಇಂಗ್ಲೆಂಡ್​ನಿಂದ ಬಂದ 1614 ಜನರ ಪೈಕಿ 26 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜೆನೆಟಿಕ್ ಸೀಕ್ವೆನ್ಸಿಂಗ್ ಆದ ಮೇಲೆ 3 ಜನರಿಗೆ ಮ್ಯೂಟಂಟ್​ ಕೊರೊನಾ ವೈರಸ್​​ ಪಾಸಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.

ನಿಮ್ಹಾನ್ಸ್‌ನಲ್ಲಿ ಟೆಸ್ಟ್ ಆದ 3 ಜನರಿಗೆ ಪಾಸಿಟಿವ್ ಆಗಿದೆ. ವರದಿ ತೆಗೆದುಕೊಂಡು ನಿಮ್ಹಾನ್ಸ್ ಅವರ ಜೊತೆ ಮಾತನಾಡಿದ್ದೇನೆ. 26 ಜನರನ್ನೂ ಕೂಡಾ ಐಸೋಲೇಟ್ ಮಾಡಲಾಗಿದೆ.  ಪ್ರಾಥಮಿಕ ದ್ವಿತೀಯ ಸಂಪರ್ಕ ಇರುವವರನ್ನು ಕ್ವಾರಂಟೀನ್‌ಗೆ ಒಳಪಡಿಸಲಾಗಿದೆ. ವಿಮಾನದಲ್ಲಿ ಬಂದಿರುವ ಸಹಪ್ರಯಾಣಿಕರ‌ ವರದಿ ಪಡೆದಿದ್ದೇವೆ. ಇಬ್ಬರು ತಾಯಿ ಮಗುವಿಗೆ ಪಾಸಿಟಿವ್ ಆಗಿದೆ. ಇಂಗ್ಲೆಂಡ್​ನಿಂದ ಬಂದು ಸಂಪರ್ಕಕ್ಕೆ ಸಿಗದವರನ್ನು 48 ಗಂಟೆಗಳಲ್ಲಿ ಹುಡುಕಿಕೊಡಲಾಗುತ್ತೆ. ಎಲ್ಲರನ್ನೂ ಪತ್ತೆ ಮಾಡಿ ನಿಮಗೆ ಮಾಹಿತಿ ಕೊಡುತ್ತೇವೆ ಎಂದಿದ್ದಾರೆ. ಇಂದು ಸಭೆ ನಡೆಸಲಾಗ್ತಿದೆ. ಸಭೆ ಬಳಿಕ ಎಲ್ಲಾ ಮಾಹಿತಿ ನೀಡುತ್ತೇವೆ ಎಂದು ಸುಧಾಕರ್ ತಿಳಿಸಿದ್ರು.

ಇದೇ ವೇಳೆ ಜನವರಿ 1ರಿಂದ ಶಾಲಾ ಕಾಲೇಜು ಆರಂಭಿಸುವ ವಿಚಾರವಾಗಿ ಸ್ಪಷ್ಟನೆ ನೀಡಿದ ಸುಧಾಕರ್, ಶಾಲೆಗಳ ರೀ-ಓಪನ್ ಮಾಡುವ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. 10 ಹಾಗೂ 12ನೇ ತರಗತಿಗಳು ಓಪನ್ ಆಗೋದಕ್ಕೆ ಯಾವುದೇ ಸಮಸ್ಯೆ ಇಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಹಾಗು ತಜ್ಞರು ಜೊತೆ ಸಭೆ ಮಾಡುತ್ತೇವೆ ಎಂದು ಹೇಳಿದರು.