ಮಹಾನಗರ ಪಾಲಿಕೆ ಪ್ರವೇಶ ದ್ವಾರ ಮುಂದೆ ಸೋಮವಾರ ಬೆಳಿಗ್ಗೆ ಸುಮಾರು11 ಗಂಟೆಗೆ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಧ್ವಜ ಸ್ತಂಭದ ಸಮೇತ ಕನ್ನಡ ಧ್ವಜ ಹಾರಿಸಿ ಕನ್ನಡ ಮಾತೆಗೆ ಜಯ

0

ಬೆಳಗಾವಿ: ಮಹಾನಗರ ಪಾಲಿಕೆ ಪ್ರವೇಶ ದ್ವಾರ ಮುಂದೆ ಸೋಮವಾರ ಬೆಳಿಗ್ಗೆ ಸುಮಾರು11 ಗಂಟೆಗೆ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಧ್ವಜ ಸ್ತಂಭದ ಸಮೇತ ಕನ್ನಡ ಧ್ವಜ ಹಾರಿಸಿ ಕನ್ನಡ ಮಾತೆಗೆ ಜಯ ಘೋಷಣೆ ಕೂಗಿದರು. ಇನ್ನೊಂದು ಕಡೆ ಅದನ್ನು ತೆರವುಗೊಳಿಸುವಂತೆ ಪೊಲೀಸ್ ಅಧಿಕಾರಿಗಳ ಒತ್ತಡ ಹೇರಿದರು ಅದಕ್ಕೆ ಬಗ್ಗದ ಕನ್ನಡ ಪರ ಹೋರಾಟಗಾರರು ಅದನ್ನು ತೆರವುಗೊಳಿಸದಂತೆ ಇಡೀ ರಾತ್ರಿಯಲ್ಲ ಕೊರೆಯುವ ಚಳಿಯಲ್ಲೂ ಅದರ ಕಾವಲು ಮಾಡುವುದರ ಜೊತೆಗೆ ರಾತ್ರಿಯಲ್ಲ ಧರಣಿ ನಡೆಸಿದರು. ಇತ್ತ ಬೆಳಕಾಗುತ್ತಿದ್ದಂತೆ ಮತ್ತೆ ಕನ್ನಡ ಮಾತೆಗೆ ಜಯ ಘೋಷಗಳನ್ನು ಕೂಗುತ್ತಾ ಧರಣಿ ಮುಂದುವರೆಸಿದ್ದಾರೆ.

ಜೊತೆಗೆ ಇಂದು ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನಾಚರಣೆ ಆಗಿದ್ದರಿಂದ ಅದೇ ನಾಡ ಧ್ವಜದ ಕಂಬದ ಮೇಲೆ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರ ಜೊತೆಗೆ ಬಾರಿಸು ಕನ್ನಡ ಡಿಂಡಿಮವ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಜಯ ಘೋಷಣೆಗಳನ್ನು ಕೂಗಿದರು.