ಬೆಳಗಾವಿ ಲೋಕಾಸಭೆ ಉಪ ಚುನಾವಣೆ 2 ಅಭ್ಯರ್ಥಿಗಳ ಹೆಸರು ಮುನ್ನಲೆಗೆ ಬಂದಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ: ಬೆಳಗಾವಿ ಲೋಕಾಸಭೆ ಉಪ ಚುನಾವಣೆ 2 ಅಭ್ಯರ್ಥಿಗಳ ಹೆಸರು ಮುನ್ನಲೆಗೆ ಬಂದಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಮೂರು ಹೆಸರುಗಳನ್ನು ಸೂಚಿಸಲಾಗಿತ್ತು. ಪಿಲ್ಟರ್ ರಿಂಗ್ ಎರಡು ಹೆಸರುಗಳು ಉಳಿದಿವೆ. ಅಂತಿಮವಾಗಿ ಸೂಕ್ತ ಅಭ್ಯರ್ಥಿ ಟಿಕೆಟ್ ನೀಡಲಾಗುತ್ತದೆ ಎಂದರು. ಆದ್ರೆ ಇಬ್ಬರು ಅಭ್ಯರ್ಥಿಗಳ ಹೆಸರು ಹೇಳಲು ನಿರಾಕರಿಸಿದರು.
ಟಿಕೆಟ್ ಪಟ್ಟಿಯಲ್ಲಿ ತಮ್ಮ ಹೆಸರಿಗೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನ ಹೆಸರಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳಿದರು.
ಪಕ್ಷದ ಚಿಹ್ನೆ ಮೇಲೆ ಮಹಾನಗರ ಪಾಲಿಕೆ ಚುನಾವಣೆ ಎದುರಿಸುವ ಬಗ್ಗೆ ಪ್ರತಿಕ್ರಿಯಿಸಿ, ಅಧ್ಯಕ್ಷರು ಈಗಾಗಲೇ ಕಮಿಟಿ ರಚನೆ ಮಾಡಿದ್ದಾರೆ. ಡಿ. 31 ರಂದು ಬೆಂಗಳೂರಿನಲ್ಲಿ ಈ ವಿಚಾರವಾಗಿ ಸಭೆ ಇದೆ. ಸಭೆಯಲ್ಲಿ ಅಂತಿಮವಾಗಿ ತೀರ್ಮಾನಿಸಲಾಗುತ್ತದೆ. ಸದ್ಯಕ್ಕೆ ಈ ಕುರಿತು ಏನನ್ನು ಹೇಳಲಾಗುವುದಿಲ್ಲ. ಅಲ್ಲಿಯವರೆಗೂ ಕಾಯಬೇಕು ಎಂದರು.
ಪಾಲಿಕೆ ಎದುರು ಕನ್ನಡ ಭಾವುಟ ಹಾರಿಸಿರುವ ವಿಚಾರವಾ ಮಾತನಾಡಿ, ಸರ್ಕಾರ, ಜಿಲ್ಲಾಡಳಿತವೇ ಈ ಬಗ್ಗೆ ನಿರ್ಧಾರ ತಗೆದಯಕೊಳ್ಳಬೇಕು. ಅನವಶ್ಯಕ ಸಮಸ್ಯೆಗಳಿಗೆ ಹುಟ್ಟು ಹಾಕದೇ ಸಮಸ್ಯೆ ಬಗೆಹರಿಸಬೇಕು ಎಂದು ಸಲಹೆ ನೀಡಿದರು.
ಉಪ ಸಭಾಪತಿ ದರ್ಮೇಗೌಡ ಅವರು, ಈ ರೀತಿ ನಿರ್ಧಾರಕ್ಕೆ ಕೈ ಹಾಕಬಾರದಿತ್ತು. ಆತ್ಮಹತ್ಯೆ ಪ್ರಕರಣವನ್ನು ಕಾಂಗ್ರೆಸ್ ಗಲಾಟೆಗೆ ಲಿಂಕ್ ಮಾಡಬೇಡಿ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಸಮ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಜನ ನಾಯಕರು ಹೀಗೆ ಮಾಡಿದ್ರೆ ಜನಸಾಮಾನ್ಯರ ಮೇಲೆ ಕಂಡಿತ ಪರಿಣಾಮ ಬೀರತ್ತೆ. ಈ ರೀತಿಯ ಘಟನೆಗಳು ಮುಂದೆ ನಡೆಯಬಾರದು. ಡೆತ್ ನೋಟ ಸಿಕ್ಕಿದೆ ಎನ್ನಲಾಗುತ್ತಿದೆ. ಪೊಲೀಸರು ಕುಲಂಕುಶವಾಗಿ ತನಿಖೆ ನಡೆಸಬೇಕು. ಅದು ಪೊಲೀಸರ ಕರ್ತವ್ಯ- ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ.