ಎಂಇಎಸ್) ಮತ್ತೆ ಕ್ಯಾತೆ ಆರಂಭಿಸಿದ್ದು, ಇದೀಗ ಇಲ್ಲಿನ ಮಹಾನಗರ ಪಾಲಿಕೆ ಎದುರು ಕನ್ನಡಪರ ಹೋರಾಟಗಾರರು ಸ್ಥಾಪಿಸಿರುವ ಕನ್ನಡ ಧ್ವಜಸ್ತಂಭ ತೆರವು ಮಾಡಬೇಕು ಎಂದು ಉದ್ಧಟನ ತೋರಿದೆ.

0

ಬೆಳಗಾವಿ:  ಸದಾ ನಾಡದ್ರೋಹಿ ಕೆಲಸ ಮಾಡುತ್ತಾ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮತ್ತೆ ಕ್ಯಾತೆ ಆರಂಭಿಸಿದ್ದು,  ಇದೀಗ ಇಲ್ಲಿನ  ಮಹಾನಗರ ಪಾಲಿಕೆ ಎದುರು ಕನ್ನಡಪರ ಹೋರಾಟಗಾರರು ಸ್ಥಾಪಿಸಿರುವ ಕನ್ನಡ ಧ್ವಜಸ್ತಂಭ ತೆರವು ಮಾಡಬೇಕು ಎಂದು ಉದ್ಧಟನ ತೋರಿದೆ.

ಎಂಇಎಸ್ ಮುಖಂಡ ಶುಭಂ ಶೆಲ್ಕೆ ನೇತೃತ್ವದ ನಿಯೋಗ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.  ಎರಡು ದಿನಗಳಲ್ಲಿ ಧ್ವಜ ತೆರವು ಮಾಡಬೇಕು ಎಂದು ಗಡುವು ನೀಡುವ ಮೂಲಕ ಎಂಇಎಸ್ ಉದ್ಧಟತನ ಪ್ರದರ್ಶಿಸಿದೆ.

ರಾಷ್ಟ್ರಧ್ವಜ ಹಾಗೂ ರಾಷ್ಟ್ರ ಗೀತೆಗೆ ಕನ್ನಡಪರ ಸಂಘಟನೆಗಳು ಅವಮಾನ ಮಾಡಿವೆ. ಹೀಗಾಗಿ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಒಂದು ವೇಳೆ ಡಿ.31ರೊಳಗೆ ಕನ್ನಡ ಧ್ವಜಸ್ತಂಭವನ್ನು ತೆರವು ಮಾಡದಿದ್ದರೆ ಪಾಲಿಕೆ ಕಚೇರಿ ಮೇಲೆ ಭಗವಾ ಧ್ವಜ ಹಾರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪಾಲಿಕೆ ಎದುರು ನಿನ್ನೆಯಷ್ಟೇ ಕನ್ನಡಪರ ಹೋರಾಟಗಾರರು ಕನ್ನಡ ಧ್ವಜಸ್ತಂಭ ಸ್ಥಾಪಿಸಿದ್ದರು. ಚಳಿಯನ್ನು ಲೆಕ್ಕಿಸದೇ ರಾತ್ರಿ ಇಡೀ ಕನ್ನಡಪರ ಹೋರಾಟಗಾರರು ಧ್ವಜಸ್ತಂಭ ಕಾವಲು  ಕಾಯ್ದು ಕುಳಿತಿದ್ದರು.