ಅಪರಿಚತ ವ್ಯಕ್ತಿ ಸಾವು

0

ಬೆಳಗಾವಿ, ಡಿ.29 : ಅಪರಿಚಿತ ವ್ಯಕ್ತಿ 60 ವರ್ಷದವನಾಗಿದ್ದು, ಡಿಸೆಂಬರ್ 28 ರ ಮುಂಜಾನೆ 10-40 ಗಂಟೆ ಸುಮಾರಿಗೆ ಗೋಕಾಕ ರೋಡ್ ರೈಲ್ವೆ ನಿಲ್ದಾಣದ ಮೇನ ಲೈನದಲ್ಲಿ ರೈಲ್ವೆ ಕಿ. ಮಿ. ನಂ 662/700 ರೈಲು ಹಳಿಗಳಲ್ಲಿ ಯಾವುದೋ ಕಾರಣಕ್ಕೆ ರೈಲು ಹಳಿಗಳನ್ನು ದಾಟುವಾಗ ಚಲಿಸುತ್ತಿರುವ ರೈಲು ಗಾಡಿಗೆ ಸಿಕ್ಕ ಆಕಸ್ಮಿಕವಾಗಿ ಮೃತಪಟ್ಟಿರುತ್ತಾನೆ ಎಂದು ರೈಲ್ವೆ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅಪರಿಚಿತ ವ್ಯಕ್ತಿ (60 ) ವರ್ಷ ವಯಸ್ಸು ಮೃತನ ಎತ್ತರ 5 ಪುಟ 5 ಇಂಚು ಇದ್ದು, ಸಾಧಾರಣ ಕಪ್ಪು, ಸದೃಢ ಮೈಕಟ್ಟು, ಕಪ್ಪು ಬಿಳಿ ಕೂದಲು, ಬಿಳಿ ಮೀಸೆ, ಬಿಳಿ ನೆಹರು ಶರ್ಟ್, ಬಿಳಿ ಬನಿಯನ್, ಬಿಳಿ ದೋತ್ತರ ಹಸಿರು ಲಗೋಟಿ ಧರಿಸಿರುತ್ತಾನೆ.

ಈ ಪ್ರಕಾರ ಚಹರೆಯುಳ್ಳ ವ್ಯಕ್ತಿ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಾದರೂ ಇದ್ದಲ್ಲಿ ಕೂಡಲೇ ರೈಲ್ವೆ ಪೆÇಲೀಸ್ ಠಾಣೆಯ ಪೆÇಲೀಸ್ ಉಪ ನಿರೀಕ್ಷಕರು ಇವರಿಗೆ ದೂ. ಸಂ. 0831-2405273 ಅಥವಾ ಮೊ. 9480802127, ಇಮೇಲ್: belagaumrly @ksp.gov.in ಅನ್ನು ಸಂಪರ್ಕಿಸಿ ಎಂದು ರೈಲ್ವೆ ಪೆÇಲೀಸ್ ಠಾಣೆಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.