ಬೆಳಗಾವಿ ನಗರದಲ್ಲಿ ಹೊಸ ವರ್ಷಾಚರಣೆಯ ನಿರ್ಬಂಧ; ಕೋವಿಡ್-19 ಮಾರ್ಗಸೂಚಿಗಳ ಕಡ್ಡಾಯ ಪಾಲನೆ; ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ

0

ಬೆಳಗಾವಿ ನಗರದಲ್ಲಿ ಹೊಸ ವರ್ಷಾಚರಣೆಯ ನಿರ್ಬಂಧ; ಕೋವಿಡ್-19 ಮಾರ್ಗಸೂಚಿಗಳ ಕಡ್ಡಾಯ ಪಾಲನೆ; ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ

ರಾಜ್ಯದಲ್ಲಿ ಕೋವಿಡ-19 ಸೋಂಕು ಇನ್ನು ಹರಡುತ್ತಿದ್ದು, ಈ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೇ ನಿಟ್ಟಿನಲ್ಲಿ 2021 ರ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ. ಆರ್‍ಡಿ/465/ಟಿಎನ್‍ಆರ್/2020 ದಿನಾಂಕ. 17-12-2020 ಮತ್ತು ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲೆ ರವರ ಆದೇಶ ಸಂಖ್ಯೆ. ಡಿಸಿ/ಆರೋಗ್ಯ/ವಹಿ-63/2019-20 ದಿನಾಂಕ.19-12-2020 ನೇದ್ದರ ಆದೇಶಗಳನ್ನು ಬೆಳಗಾವಿ ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿ ತಂದಿದ್ದು, ನಗರದಲ್ಲಿ ವಿಜೃಂಭನೆಯ ಹೊಸ ವರ್ಷಾಚರಣೆಗೆ ಕಡಿವಾಣ ಹಾಕುತ್ತ, ಸರಳ, ಭಕ್ತಿಪೂರ್ವಕ ಹಾಗೂ ಅರ್ಥಗರ್ಭಿತವಾದ ಆಚರಣೆ ಕರೆ ನೀಡಲಾಗಿದೆ.

ನಗರದಲ್ಲಿ ಪ್ರತಿದಿನದಂತೆ ಎಲ್ಲ ದೈನಂದಿನ ಚಟುವಟಿಕೆಗಳಿಗೆ ಮಾತ್ರ ಆಸ್ಪದವಿದ್ದು, ಸಾಮೂಹಿಕ ಕೂಟ, ವಿಶೇಷ ಯೋಜಿತ, ಒಟ್ಟುಗೂಡುವಿಕೆ, ವಿಶೇಷ ಡಿಜೆ-ಡಾನ್ಸ ಕಾರ್ಯಕ್ರಮಗಳು, ಪಾರ್ಟಿ ಇತ್ಯಾದಿಗಳನ್ನು ನಿಷೇಧಿಸಿದ್ದು, ಕ್ಲಬ್/ಪಬ್/ರೆಸ್ಟೋರೆಂಟಗಳನ್ನು ಪ್ರತಿನಿತ್ಯದಂತೆ ಮಾತ್ರ ನಡೆಸಿಕೊಂಡು ಹೋಗಬಹುದಾಗಿದೆ. ಬೆಳಗಾವಿ ನಗರದಲ್ಲಿ ರಾಜ್ಯ ಸರ್ಕಾರದ ಹಾಗೂ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲೆರವರ ಮೇಲಿನ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಐಪಿಸಿ ಸೆಕ್ಸನ್-188 ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದೆಂದು ಪೊಲೀಸ್ ಆಯುಕ್ತರು ತಿಳಿಸಿರುತ್ತಾರೆ. ಸರಳ ರೀತಿಯಲ್ಲಿ ಹೊಸವರ್ಷವನ್ನು ಆಚರಿಸುವಂತೆ ಹಾಗೂ ಸದರಿ ಕಾಲಕ್ಕೆ ಪೊಲೀಸರು ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸುತ್ತ ಸಹಕರಿಸುವಂತೆ ನಗರದ ಎಲ್ಲ ಸಾರ್ವಜನಿಕರಿಗೆ ಕೋರಲಾಗಿದೆ.