ಮದ್ಯದ ಅಂಗಡಿ, ವೈನಶಾಪ್, ಬಾರ್‍ಗಳಲ್ಲಿ, ಕ್ಲಬ್‍ಗಳಲ್ಲಿ ಮತ್ತು ಹೊಟೇಲ್‍ಗಳಲ್ಲಿ ಮದ್ಯ ಮಾರಾಟ ಮತ್ತು  ಮದ್ಯ ಸಾಗಣಿಕೆಯನ್ನು ನಿಷೇಧ .

0
ಬೆಳಗಾವಿ, ಡಿ.29: ಗ್ರಾಮಪಂಚಾಯತ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯ ಕಾಲಕ್ಕೆ ಬೆಳಗಾವಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21(1) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 31 ರ ಪ್ರಕಾರ ಬೆಳಗಾವಿ ನಗರದ, ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಿನಾಂಕ: 30/12/2020 ರಂದು ಬೆಳಿಗ್ಗೆ 0600 ಗಂಟೆಯಿಂದ ದಿನಾಂಕ: 31/12/2020 ರಂದು ಬೆಳಿಗ್ಗೆ 0600 ಗಂಟೆಯವರೆಗೆ ಮದ್ಯದ ಅಂಗಡಿ, ವೈನಶಾಪ್, ಬಾರ್‍ಗಳಲ್ಲಿ, ಕ್ಲಬ್‍ಗಳಲ್ಲಿ ಮತ್ತು ಹೊಟೇಲ್‍ಗಳಲ್ಲಿ ಮದ್ಯ ಮಾರಾಟ ಮತ್ತು
ಮದ್ಯ ಸಾಗಣಿಕೆಯನ್ನು ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್ ನಿಷೇಧಿಸಿ ಆದೇಶಿಸಿದ್ದಾರೆ.
ಈ ಅವಧಿಯಲ್ಲಿ ಮದ್ಯದ ಅಂಗಡಿಗಳನ್ನು ಹಾಗೂ ಕೆಎಸ್‍ಬಿಸಿಎಲ್ ಡಿಪೋಗಳನ್ನು, ಹೊಟೇಲ್‍ಗಳಲ್ಲಿರುವ
ಬಾರ್‍ಗಳನ್ನು ಮುಚ್ಚತಕ್ಕದ್ದು ಹಾಗೂ ಎಲ್ಲ ಅಬಕಾರಿ ಸನ್ನದು ಅಂಗಡಿಗಳನ್ನು ಮುಚ್ಚಿ ಸೀಲ್ ಹಾಕತಕ್ಕದ್ದು.
ಇದಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ಅಬಕಾರಿ ಇನ್ಸ್‍ಪೆಕ್ಟರ್ ಹಾಗೂ ಉಪ ವಿಭಾಗ ಅಬಕಾರಿ ಅಧೀಕ್ಷಕರು, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(2) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 31 ರ ಪ್ರಕಾರ ಅವಶ್ಯಕತೆ ಕಂಡುಬಂದಲ್ಲಿ ಶಾಂತಿ ಪಾಲನೆಗಾಗಿ
ಸೂಕ್ತ ಕ್ರಮ ಕೈಗೊಳ್ಳಬೇಕೆಂದ ಆದೇಶ ನೀಡಿರುತ್ತಾರೆ.
ಅಬಕಾರಿ ಉಪ ಆಯುಕ್ತರು, ಬೆಳಗಾವಿ ತಾಲೂಕ ಮತ್ತು ಉಪ ಪೊಲೀಸ್ ಆಯುಕ್ತರು
(ಅ&ಸಂ) ಬೆಳಗಾವಿ ನಗರ ಹಾಗೂ ಅವರ ಅಧೀನ ಅಧಿಕಾರಿಗಳು, ಹೆಚ್ಚುವರಿ
ಅಬಕಾರಿ ಅಧೀಕ್ಷಕರು, ಬೆಳಗಾವಿ ಮತ್ತು ಅಬಕಾರಿ ಉಪ-ಅಧೀಕ್ಷಕರು, ಬೆಳಗಾವಿ ಇವರುಗಳು ತಮ್ಮ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ  ತರುವಂತೆ ಆದೇಶದಲ್ಲಿ ತಿಳಿಸಿದ್ದಾರೆ.