ಗ್ರಾಮ ಪಂಚಾಯ್ತಿ ಎಲೆಕ್ಷನ್ ಭರ್ಜರಿ ಗೆಲುವು ವಿರೋಧಿ ಬಣದಿಂದ ಮುಖಂಡನ ಬರ್ಬರ ಹತ್ಯೆ

0

ಹುಕ್ಕೇರಿ:  ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮ ಪಂಚಾಯ್ತಿ ಎಲೆಕ್ಷನ್ ಭರ್ಜರಿ ಗೆಲುವು ವಿರೋಧಿ ಬಣದಿಂದ ಮುಖಂಡನ ಬರ್ಬರ ಹತ್ಯೆ ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ ತಪ್ಪಿಸಿದ ಹುಕ್ಕೇರಿ ಪೊಲೀಸರು ಹೌದು ನಿನ್ನೆ ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ.

ಸೋತ ಸಿಟ್ಟಿನಲ್ಲಿ ಹಲ್ಲೆ ಮಾಡಲು ವಿರೋಧಿ ಬಣ ಎಷ್ಟೋ ಜೀವಗಳನ್ನು ತೆಗೆಯುತ್ತೀರೆಂದು ಗ್ರಾಮಸ್ಥರು ಮಾತನಾಡುತ್ತಿದ್ದರು ಆದರೆ ಪೊಲೀಸರು ಸರಿಯಾದ ಸಮಯಕ್ಕೆ ಬಂದು ಎಷ್ಟೋ ಜೀವಗಳನ್ನು ಉಳಿಸಿದ್ದಾರೆ

ಎಂದು ಸುಲ್ತಾನಪುರ ಸಾರ್ವಜನಿಕರು ಅಲ್ಲಲ್ಲೇ ಮಾತನಾಡುತ್ತಿದ್ದರು.ಚುನಾವಣೆಯಲ್ಲಿ ಇವರ ನೇತೃತ್ವದ ಪೇನಲ್‍ನಲ್ಲಿ 10ಕ್ಕೆ 10 ಸೀಟ್‍ಗಳು ಬಂದಿವೆ. ಆದ್ರೆ ಇದೇ ಹೊಟ್ಟೆ ಕಿಚ್ಚಿನಿಂದ ವಿರೋಧಿ ಬಣದವರು ಈ ಮುಖಂಡನನ್ನೆ ಮರ್ಡರ್ ಮಾಡಿರುವ ಒಂದು ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನ್‍ಪುರ ಗ್ರಾಮದಲ್ಲಿ ನಡೆದಿದೆ.ಹೌದು ಹೀಗೆ ನೀವು ಫೋಟೋದಲ್ಲಿ ನೋಡುತ್ತಿರುವ ವ್ಯಕ್ತಿ ಶಾನುರಸಾಬ್ ದಸ್ತಗೀರ್‍ಸಾಬ್ ಮುಲ್ಲಾ ಕೊಲೆಯಾಗಿರುವ ದುರ್ದೈವಿ. ಸುಲ್ತಾನ್‍ಪುರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಎರಡು ಬಣಗಳ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿತ್ತು.

ನಿನ್ನೆಯಷ್ಟೇ ಫಲಿತಾಂಶ ಹೊರ ಬಿದ್ದಾಗ ಶಾನುರಸಾಬ್ ಮುಲ್ಲಾ ಪೇನಲ್‍ನ 10ಕ್ಕೆ 10 ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸುವ ಮೂಲಕ ಪಂಚಾಯ್ತಿ ಗದ್ದುಗೆಯನ್ನು ಹಿಡಿಯಲು ಯಶಸ್ವಿಯಾಗಿದ್ದರು. ಈ ಸೋಲಿನಿಂದ ಕಂಗಾಲಾಗಿದ್ದ ವಿರೋಧಿ ಬಣದವರು ಬುಧವಾರ ರಾತ್ರಿ ಶಾನುರಸಾಬ್ ಮುಲ್ಲಾ ಮನೆ ಮೇಲೆ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಶಾನುರಸಾಬ್‍ನನ್ನು ಬೆಳಗಾವಿ ವಿಜಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಿಗ್ಗೆ ಶಾನುರಸಾಬ್ ಕೊನೆಯುಸಿರೆಳೆದಿದ್ದಾನೆ. ಘಟನೆ ಕುರಿತು ಕೊಲೆಯಾದ ಶಾನುರ್ ಪುತ್ರ ಮಲಿಕ್‍ಜಾನ್ ಮುಲ್ಲಾ ಪತ್ರಿಕೆ ಮಾದ್ಯಮ ಜೊತೆ ಮಾತನಾಡಿ ನಮ್ಮ ಗೆಲುವನ್ನು ಸಹಿಸಿಕೊಳ್ಳಲು ಆಗದೇ ಬಸ್ಸಾಪುರ ಗ್ರಾಮದವರು ಹಾಗೂ ಸುಲ್ತಾನಪುರ ಗ್ರಾಮದ ಶಬ್ಬಿರ, ಲಿಯಾಕ್, ದಸ್ತಗೀರ್, ಸಲೀಂ ಮುಲ್ಲಾ, ಮೌಶಿನ್ ಖಾಜಿ ಸೇರಿದಂತೆ 15ಕ್ಕೂ ಹೆಚ್ಚು ಜನರು ನಮ್ಮ ತಂದೆಯನ್ನು ಹೊಡೆದು ಕೊಲೆ ಮಾಡಿದ್ದಾರೆ

ಎಂದು ಕಣ್ಣೀರು ಹಾಕಿದ.ಮೋಸದಿಂದ ನಮ್ಮ ಅಣ್ಣನನ್ನು ಹೊಡೆದು ಕೊಂದು ಬಿಟ್ಟಿದ್ದಾರೆ ಎಂದು ಕೊಲೆಯಾದ ಶಾನೂರ್‍ಸಾಬ್ ಸಹೋದದರು ಕಣ್ಣೀರು ಹಾಕಿದ್ದು, ಎಂತವರ ಕರುಳು ಕೂಡ ಚುರುಕು ಎನ್ನುವಂತಿತ್ತು.ಇನ್ನು ಗ್ರಾಮಸ್ಥರಾದ ಬಾಳಗೌಡ ಪಾಟೀಲ್ ಎಂಬುವವರು ಇದೇ ವೇಳೆ ಮಾತನಾಡಿ ಚುನಾವಣೆ ಕೌಂಟಿಂಗ್ ಮುಗಿಸಿ ನಾವು ಮನೆಗೆ ಬಂದಿದ್ದೇವು. ನಮ್ಮ 10 ಅಭ್ಯರ್ಥಿಗಳು ಗೆದ್ದಿದ್ದರು.

ರಾತ್ರಿ 11 ಗಂಟೆ ಸುಮಾರಿಗೆ ನಾವು ಎಲ್ಲರೂ ನಿಂತಿದ್ದೇವು. ಈ ವೇಳೆ ಶಾನೂರ್‍ಸಾಬ್‍ರನ್ನು ನಮ್ಮ ವಿರೋಧಿ ಬಣದ 19 ಕ್ಕೂ ಹೆಚ್ಚು ಜನರು ಎಳೆದುಕೊಂಡು ಬಡಿಗೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಏನೇ ಆಗಲಿ ಗೆಲುವು ಸೋಲು ಶಾಶ್ವತ ಅಲ್ಲ. ಆದ್ರೆ ರಾಜಕೀಯ ಸೇಡಿಗೆ ಒಂದು ಜೀವ ಬಲಿಯಾಗಿದ್ದು ಮಾತ್ರ ದೊಡ್ಡ ದುರಂತವೇ ಸರಿ. ಹುಕ್ಕೇರಿ ಪೊಲೀಸರು ಬಶೀರ್ ದಸ್ತಗೀರ್ ಮುಲ್ಲಾ (ಮಗ )ಇವನು ಕೊಟ್ಟ ಪಿರ್ಯಾದಿಯಂತೆ ಪ್ರಕರಣವನ್ನ ದಾಖಲಿಸಿಕೊಂಡು ಪಂಚಾಯತಿ ಎಲೆಕ್ಷನ್ ನಲ್ಲಿ ಸೋತಿದ್ದರ ಸಿಟ್ಟಿನಿಂದ ತನ್ನ ಸಂಗಡ ಉಳಿದ ಆರೋಪಿತರ ಎಲ್ಲರಿಗೂ ಗೈರು ಮಂಡಳಿಯಾಗಿ ಕರೆದುಕೊಂಡು ಬಂದು ಸುಲ್ತಾನಪುರ ಗ್ರಾಮದ ಮಾಬುಸ ಭಾನಿ ದರ್ಗಾ ಹತ್ತಿರ ಮಾತನಾಡುತ್ತಾ ಕುಳಿತುಕೊಂಡಿದ್ದ ಪಿರ್ಯಾದಿ ಹಾಗೂ ಪಿರ್ಯಾದಿಯ ತಮ್ಮನಾದ ಮುಸ್ತಾಕ್ ಗುಲಾಬ್ ಮುಲ್ಲಾ ಹಾಗೂ ಪಿರ್ಯಾದಿಯ ಚಿಕ್ಕಪ್ಪನಾದ ಶಾನೂಲ್ ದಸ್ತಗೀರಸಾಬ ಮುಲ್ಲಾ ಇವರಿಗೆ ಆರೋಪಿತರೆಲ್ಲರೂ ಅವಾಚ್ಯವಾಗಿ ಬೈದು ನಾವು ಎಲೆಕ್ಷನ್ನಲ್ಲಿ ಸೋತಿದ್ದಕ್ಕೆ ನೀವು ಊರಲ್ಲಿ ಮೆರವಣಿಗೆ ಮಾಡುತ್ತಿರುವ ಮಕ್ಕಳಿಗೆ ಅವಾಚ್ಯವಾಗಿ ಬೈದು ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಅಂದವನೇ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಡಲಿಯಿಂದ ಶಾನೂಲ್ ಮುಸ್ತಾಕ ತಲೆ ಕಡಿದು ಕೈಯಲ್ಲಿದ್ದ ಕಬ್ಬಿಣದ ಸೆಳೆಯಿಂದ ಪಿರ್ಯಾದಿಯ ಬಲಗೈ ಮುಂಗೈಗೆ ಹಾಗೂ ಎಡಗೈ ಬುಜಕ್ಕೆ ಹೊಡಿ ಬಡಿ ಮಾಡಿ ಮತ್ತು ಉಳಿದ ಆರೋಪಿತರ ಎಲ್ಲರೂ ಕೈಯಿಂದ ಹೊಡಿ ಬಡಿ ಮಾಡಿ ಕಾಲಿನಿಂದ ಒದ್ದು ಇದು ಒಮ್ಮೆ ನನ್ನ ಕೈಯಲ್ಲಿ ಉಳಿದುಕೊಂಡಿದ್ದಿರಾ ಇನ್ನೊಮ್ಮೆ ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ದಮಿಕಿ ಹಾಕಿರುವ ಪ್ರಕರಣ ದಾಖಲಿಸಿಕೊಂಡ ಹುಕ್ಕೇರಿ ಪೊಲೀಸರು ಪ್ರಕರಣಕ್ಕೂ ಮೊದಲು ಮಾಹಿತಿ ತಿಳಿದ ಪೊಲೀಸರ ಸಮಯ ಪ್ರಜ್ಞೆಯಿಂದ ಇನ್ನು ಹೆಚ್ಚಿನ ಅನಾಹುತಗಳನ್ನು ತಡೆದಿದ್ದಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂದಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಹಾಗೂ ಪಿಎಸ್ಐ ಸಿದ್ರಾಮಪ್ಪ ಉಣ್ಣದ ಹಾಗೂ ಸಿಬ್ಬಂದಿ ಸಿರಾಗವಿ ಮಾಳಪ್ಪ ಆಡಿನ ಗಿಡ್ಡಪ್ಪಗೋಳ ಪಿಂಜಾರ ಎಸ್ ಐ ನಾಗಣ್ಣವರ ಮರಾಪುರೆ ಯಶಸ್ವಿಯಾಗಿದ್ದಾರೆ.ಇನ್ನು ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು ಆರೋಪಿತರ ಪತ್ತ್ತೆಗೆ ಪೊಲೀಸರು ಜಾಲ ಬಿಸಿದ್ದಾರೆ.

ಘಟನೆ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಎಸ್ ಪಿ ಅಮರನಾಥ್ ರೆಡ್ಡಿ ಹಾಗೂ ಗೋಕಾಕ್ ಡಿ ಎಸ್ ಪಿ ಚಿಕ್ಕೋಡಿ ಡಿ ಎಸ್ ಪಿ ಸಿಪಿಐ ಕೆ ಎಸ್ ಆರ್ ಪಿ ಹಾಗೂ ಡಿ ಆರ್ ವಜ್ರ ಗಾಡಿ ಸೇರಿದಂತೆ ಅನೇಕ ಪೊಲೀಸ್ ಫೋರ್ಸ್ಗಳು ಸುಲ್ತಾನಪುರ್ ಗ್ರಾಮಕ್ಕೆ ನಿಯೋಜನೆ ಮಾಡಲಾಗಿದೆ.ಅಂತೂ ಇಂತೂ ಇನ್ನು ಎಷ್ಟು ಜೀವಗಳ ಬಲಿ ಪಡೆಯುತ್ತಿದ್ದರು ಗೊತ್ತೇ ಇಲ್ಲಾ ಆದರೆ ಪೊಲೀಸರ ಕಾರ್ಯದಿಂದ ಮುಂದಿನ ಅನಾಹುತ ತಪ್ಪಿದೆ.

ಎಂದು ಗ್ರಾಮಸ್ಥರು ಮಾತನಾಡುತ್ತಿದ್ದರು.ಈ ಪ್ರಕರಣಕ್ಕೆ ನಮಗೆ ಸೂಕ್ತ ನ್ಯಾಯ ಕೊಡಿಸಿ ಎಂದು ಅವರ ಸಂಬಧಿಕರು ಮಾಧ್ಯಮದ ಮುಂದೆ ಅಳಲು ತೋಡಿಕೊಂಡರು. 19 ಜನ ಕೂಡಿ ನಮ್ಮ ತಂದೆಯ ಮೇಲೆ ಬರ್ಬರ ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ಪ್ರಕರಣ ದಲ್ಲಿ ದಾಖಲೆಯಾಗಿದೆ.