10 ನೇ ಹಾಗೂ 12 ನೇ ತರಗತಿ ಪುನರಾರಂಭ : ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಶಾಸಕ ಅನಿಲ ಬೆನಕೆ ಸಂದೇಶ :

0

 

ಬೆಳಗಾವಿ 01: ದಿನಾಂಕ 01.01.2021 ರಂದು ಕರ್ನಾಟಕದಲ್ಲಿ 10 ನೇ ಹಾಗೂ 12 ನೇ ತರಗತಿಗಳನ್ನು ಪುನರಾರಂಭಗೊಳಿಸಲು ಆದೇಶ ಹೊರಡಿಸಿದ್ದು, ಸರ್ಕಾರದ ನಿಯಮಾವಳಿಗಳನ್ವಯ ಶಾಲಾ ಕಾಲೇಜುಗಳು ಪ್ರಾರಂಭ.

ಈ ಸಂದರ್ಭದಲ್ಲಿ ಶಾಸಕರು ದೇಶದ ಹಾಗೂ ರಾಜ್ಯದ ಶೈಕ್ಷಣಿಕ ಅಭಿವೃದ್ದಿಯ ಹಿತದೃಷ್ಠಿಯಿಂದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಬಿ.ಎಸ್.ಯಡಿಯೂರಪ್ಪಾ ರವರ ಮುಂದಾಲೋಚನೆ ನಿರ್ಧಾರದಿಂದ ಇಂದಿನಿಂದ 10 ನೇ ಹಾಗೂ 12 ನೇ ತರಗತಿಗಳನ್ನು ಪುನರಾರಂಭಗೊಳಿಸಿದ್ದು,

ಪಾಲಕರು ಹಾಗೂ ವಿದ್ಯಾರ್ಥಿಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ ಮಾಸ್ಕ ಹಾಗೂ ಸ್ಯಾನಿಟೈಜರ್ ಉಪಯೋಗಿಸಿ ಶೈಕ್ಷಣಿಕ ಇಲಾಖೆ ಅವರೊಂದಿಗೆ ಸಹಕರಿಸಬೇಕೆಂದು ಕೋರುತ್ತೇನೆ ಹಾಗೂ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಹಾಗೂ ಶಿಕ್ಷಕರ ಸಿಬ್ಬಂದಿಗಳಿಗೆ ಶುಭ ಕೋರಿದರು ಎಲ್ಲ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಮಾಸ್ಕ ಬಳಸುವಂತೆ ಶಿಕ್ಷಕರಿಗೆ ಮನವರಿಕೆ ಮಾಡಿದರು