ಸರ್ಕಾರದ ಜನಪರ ಯೋಜನೆಗಳು: ಜನಜಾಗೃತಿಗೆ ಜ.4 ರಿಂದ ಬೀದಿನಾಟಕ ಪ್ರದರ್ಶನ

0
ಸರ್ಕಾರದ ಜನಪರ ಯೋಜನೆಗಳು: ಜನಜಾಗೃತಿಗೆ ಜ.4 ರಿಂದ ಬೀದಿನಾಟಕ ಪ್ರದರ್ಶ
ಬೆಳಗಾವಿ, ಜನವರಿ 02:: ಸರ್ಕಾರದ ವಿವಿಧ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜನವರಿ 04 ರಿಂದ 13 ರವರೆಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಬೀದಿನಾಟಕ, ಸಂಗೀತ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
     ಜನವರಿ  04 ರಿಂದ ಜನವರಿ 13 ರ ವರೆಗೆ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ.
       ಜನವರಿ 4 ರಂದು ಎಂ. ಚಂದರಗಿ ಹಾಗೂ ಗೊದಗೊಪ್ಪದಲ್ಲಿ, ಜನವರಿ 5 ರಂದು ಸಿದ್ನಾಳ ಹಾಗೂ ಕೆ.ಚಂದರಗಿ, ಜನವರಿ 6 ರಂದು ತೋಟಗಟ್ಟಿ ಹಾಗೂ ಗೊಡಚಿಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.
       ಜನವರಿ 7 ರಂದು ನರಸಾಪೂರ ಹಾಗೂ ಸಾಲಹಳ್ಳಿಯಲ್ಲಿ, ಜನವರಿ 8 ರಂದು ಕುಳ್ರರ ಹಾಗೂ ತೊಂಡಿಕಟ್ಟಿಯಲ್ಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.
       ಜನವರಿ 9 ರಂದು ಪಂಚಗಾಂವಿ ಹಾಗೂ ಉದಪುಡಿಯಲ್ಲಿ, ಜನವರಿ 10 ರಂದು ಬಿಡಕಿ ಹಾಗೂ ರೊಕ್ಕದಕಟ್ಟಿಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.
       ಜನವರಿ 11 ರಂದು ಬನ್ನೂರ ತಾಂಡೆ ಹಾಗೂ ಬನ್ನೂರದಲ್ಲಿ, ಜನವರಿ 12 ರಂದು ಹಾಲ್ಲೋಳ್ಳಿಯಲ್ಲಿ, ಜನವರಿ 13 ರಂದು ಕಂಕಣವಾಡಿ ಹಾಗೂ ತುರನೂರದಲ್ಲಿ ಬೀದಿನಾಟಕ ಹಾಗೂ ಸಂಗೀತ ಕಲಾ ಪ್ರದರ್ಶನ ನಡೆಯಲಿದೆ.
ರಾಯಬಾಗ ತಾಲ್ಲೂಕಿನ ಚಿಂಚಲಿಯ ಅಂಬೇಡ್ಕರ್ ಜಾನಪದ ಕಲಾ ಪೋಷಕ ಸಂಘ ಮತ್ತು ಖಾನಾಪುರ ತಾಲ್ಲೂಕಿನ ಹಿರೇಅಂಗರೊಳ್ಳಿಯ ಬಸವೇಶ್ವರ ಗೀಗಿ ಮೇಳ ಸಂಗೀತ ಕಲಾತಂಡಗಳು ಹತ್ತು ದಿನಗಳ ಕಾಲ ಪ್ರತಿದಿನ ಎರಡು ಗ್ರಾಮಗಳಲ್ಲಿ ಪ್ರದರ್ಶನ ನೀಡಲಿವೆ.
 ಆಯಾ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ‌ ವೀಕ್ಷಿಸುವ ಮೂಲಕ ಸರ್ಕಾರದ ಯೋಜನೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.