ಫುಲೆ ದಂಪತಿಗಳು ಬಿತ್ತಿ ಬೆಳೆದ ಫಲವೇ ಅಂಬೇಡ್ಕರ್ ಎಂಬ ಮಹಾ ಬೆಳೆ: ಡಾ.ಡಿಸೋಜಾ

0

ಬೆಳಗಾವಿ: ಇಂಗ್ಲಷ ವಿದ್ಯಾಭ್ಯಾಸದ ಫಲವಾಗಿ ವೈಚಾರಿಕ ಬದಲಾವಣೆಗೆ ಒಡ್ಡಿಕೊಂಡಿದ್ದ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ ಅವರು ಮಾಡಿದ್ದು ಬರೀ ಸುಧಾರಣೆಯಲ್ಲ ಕ್ರಾಂತಿಯಾಗಿತ್ತು, ಜಾತಿವ್ಯವಸ್ಥೆಯ ಅಸಮಾನತೆಯ ಮೇಲೆ ನಿಂತಿರುವ ಭಾರತೀಯ ಸಮಾಜದ ಕಟ್ಟಡದ ತಳಪಾಯವೇ ಕುಸಿದು ಹೋಗಿತ್ತು, ರಿಪೇರಿ ಮಾಡಿದರೆ ಸರಿ ಹೋಗಲಾರದೆಂದು ಅದನ್ನು ಕೆಡವಿ ಹೊಸದಾಗಿ ಕಟ್ಟಬೇಕೆಂದು ಸಾಮಾಜಿಕ ಕ್ರಾಂತಿಗೆ ಮುಂದಾದರು.
ಅಂದು ಅವರು ಬಿತ್ತಿ ಬೆಳೆದ ಫಲವೇ ಅಂಬೇಡ್ಕರ್ ಎಂಬ ಮಹಾಬೆಳೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ್ ಡಿಸೋಜಾ ಹೇಳಿದರು.
ಅವರಿಂದು ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕವು ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಛೇರಿಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ಅರಿವಿನ ತಾಯಿ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಹಾಗೂ ತಾಲೂಕಾ ಸಂಚಾಲಕರ ಪ್ರಥಮ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಊಳಿಗಮಾನ್ಯ ವ್ಯವಸ್ಥೆ ಪ್ರಬಲವಾಗಿದ್ದ ಕಾಲದಲ್ಲಿ ಸಮಾಜದ ಪ್ರತಿರೋಧದ ನಡುವೆ ಬಾಲ್ಯವಿವಾಹ ನಿμÉೀಧ, ವಿಧವೆಯರ ಪುನರ್ ವಿವಾಹ, ವಿಧವೆಯರ ಕೇಶಮುಂಡನ ನಿರಾಕರಣೆ, ಅಂತರ್ ಜಾತಿ ವಿವಾಹಕ್ಕೆ ಪೆÇ್ರೀತ್ಸಾಹ, ಅನಾಥ ಮತ್ತು ದಲಿತ ಮಹಿಳೆಯರ ಪುನರ್ ವಸತಿ ಕೇಂದ್ರಗಳ ಸ್ಥಾಪನೆ ಮುಂತಾದ ಕ್ರಾಂತಿಕಾರಕ ಬದಲಾವಣೆಗಳಿಂದ ಆಧುನಿಕ ಭಾರತದ ಮಹಾತ್ಮರೆನಿಸಿದ್ದಾರೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕುಗಳ ನೂತನ ಸಂಚಾಲಕರುಗಳ ಸಮ್ಮಿಲನ ಏರ್ಪಡಿಸಲಾಗಿತ್ತು. ಸುನಂದಾ ಭರಮನಾಯ್ಕರ, ಶಬಾನಾ ಅಣ್ಣಿಗೇರಿ, ಸಂಜೀವ ಹಾದಿಮನಿ, ಆನಂದ ಹಂಪನ್ನವರ, ಅರ್ಜುನ್ ನಿಡಗುಂದೆ ಸಮ್ಮಿಲನದಲ್ಲಿ ಮಾತನಾಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಪಡೆದ ಅಡಿವೆಪ್ಪ ಇಟಗಿ, ಮುಹಮ್ಮದ್ ರಫಿ ದೊಡಮನಿ, ಸಂಜೀವ ಹಾದಿಮನಿ ಅವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಮಾತನಾಡಿ ಒಂದು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಗುರುತಿಸಿಕೊಂಡಿರುವ ಬರಹಗಾರರು, ಚಿಂತಕರು ಹಾಗೆ ಬದುಕಬೇಕು ಮತ್ತು ಯಾರೊಂದಿಗೆ ಗುರುತಿಸಿಕೊಳ್ಳಬೇಕು,ಯಾರೊಂದಿಗೆ ಗುರುತಿಸಿಕೊಳ್ಳಬಾರದು ಎಂಬ ಅಂತರವನ್ನು ಸದಾ ಕಾಯ್ದುಕೊಂಡು ಜನಪರವಾಗಿರಬೇಕು ಎಂದು ನೂತನ ಸಂಚಾಲಕರನ್ನು ಉದ್ದೇಶಿಸಿ ಹೇಳಿದರು. ಪ್ರಾರಂಭದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ರವೀಂದ್ರ ನಾಯ್ಕರ್, ಜಿ ವ್ಹಿ ಕುಲಕರ್ಣಿ ಡಾ. ಅಶೋಕ್ ಡಿಸೋಜಾ ಅವರು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು. ಸಂವಿಧಾನದ ಪೂರ್ವ ಪೀಠಿಕೆಯ ಓದಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಧಾ ಕೊಟಬಾಗಿ, ಸರಸ್ವತಿ ಆಲಖನೂರೆ,ಸುರೇಖಾ ಕೊಟ್ರೆ, ಪ್ರಿಯಾಂಕಾ ಉಪ್ಪಾರ ಅವರು ಕ್ರಾಂತಿಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಮನೋಹರ ಕಾಂಬಳೆ, ನಿಂಗಪ್ಪ ಸಂಗ್ರೆಜಿಕೊಪ್ಪ, ಮಲ್ಲಿಕಾರ್ಜುನ ಲೋಕಳಿ, ನೇಮಿಚಂದ್ರ, ಮಹೇಶ್ ಸಿಂಗೆ, ಆಕಾಶ್ ಬೇವಿನಕಟ್ಟಿ, ಹನುಮಂತ ಯರಗಟ್ಟಿ, ಪಾಂಡುರಂಗ ಗಾಣಿಗೇರ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಚಂದ್ರಪ್ಪ ಹರಿಜನ, ಮುಹಮ್ಮದ್ ಹನೀಫ್ ಮುಲ್ಲಾ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲಕ್ಷ್ಮೀ ಮಾಳಂಗಿ, ಆರತಿ ಅಕ್ಕನ್ನವರ ಮಂಜುನಾಥ ಪಾಟೀಲ, ಬಾಲಕೃಷ್ಣ ನಾಯಕ ಸ್ವಾಗತ ಗೀತೆ ಹಾಡಿದರು. ಜಿಲ್ಲಾ ಸಂಚಾಲಕರಾದ ದೇಮಣ್ಣ ಸೊಗಲದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿದ್ರಾಮ ತಳವಾರ ಸ್ವಾಗತಿಸಿದರು, ಅಕ್ಷತಾ ಯಳ್ಳೂರ ನಿರ್ವಹಿಸಿದರು, ಶಂಕರ್ ಬಾಗೇವಾಡಿ ವಂದಿಸಿದರು.