ಕಂಗ್ರಾಳಿ ಕೆಎಚ್ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯರುಗಳ ಅಭಿನಂದನಾ ಕಾರ್ಯಕ್ರ

0

ಬೆಳಗಾವಿ : ಕಂಗ್ರಾಳಿ ಕೆಎಚ್ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯರುಗಳ ಅಭಿನಂದನಾ ಕಾರ್ಯಕ್ರಮವನ್ನು ಹಲತಗಾ ವಾರ್ಡ್ ವ್ಯಾಪ್ತಿಯ ಕಡಿ ಮಶನ್ ಗ್ರಾಮದ ವ್ಯಾಪ್ತಿಯಲ್ಲಿ ನಡೆಯಿತು ಈ  ಕಾರ್ಯಕ್ರಮದಲ್ಲಿ ಮಾನ್ಯ ಸತೀಶ್ ಜಾರಕಿಹೊಳಿ ಶಾಸಕರು ಯಮಕನಮರಡಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಮಿಸಿದ್ದರು.

ಪಂಚಾಯತಿಯ ಸದಸ್ಯರಾಗಿ ನೇಮಕಗೊಂಡಿರುವ ಸದಸ್ಯರುಗಳನ್ನು ಸನ್ಮಾನಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸತೀಶ್ ಜಾರಕಿಹೊಳಿ ಸಾಹೇಬ್ರು ಕಂಗ್ರಾಳಿ ಕೆಎಚ್ ಗ್ರಾಮದ ಕೆಲ ಗ್ರಾಮಗಳು ನನ್ನ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ  ನನ್ನ ಮತ ಕ್ಷೇತ್ರದ 30 ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ  ಜಯವಾಗಿದೆ  ಜನರು ತಮ್ಮನ್ನು  ಸೇವೆ ಮಾಡಲು  ನಿಮ್ಮನ್ನು ಗ್ರಾಮ ಪಂಚಾಯಿತಿ  ಸದಸ್ಯರನ್ನಾಗಿ  ಆಯ್ಕೆ ಮಾಡಿರುತ್ತಾರೆ ಅವರುಗಳ ಇಟ್ಟ  ನಂಬಿಕೆಯಂತೆ  ಕೆಲಸ ಕಾರ್ಯಗಳನ್ನು ಮಾಡೋಣ  ನಾವು ವಳ್ಳೆ ರೀತಿಯಾಗಿ ತಮ್ಮ ತಮ್ಮ  ಮತ ಕ್ಷೇತ್ರದಲ್ಲಿ ತಮ್ಮ ಪಂಚಾಯತಿಯ ವಾರ್ಡಗಳಲ್ಲಿ ರಸ್ತೆಯಾಗಲಿ    ಮುಲಬುತ  ಸೌಲಭ್ಯಗಳಾಗಲಿ ಒದಗಿಸಿ ಕೊಡುವಂತಾಗಲಿ ಇಂಥ ಕಾರ್ಯಗಳನ್ನು ನೀವು ಮಾಡಿದರೆ ಮತ್ತೆ ಮುಂದಿನ ಸಾರಿ ನಿಮಗೆ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಜನಗಳೇ ನಿಮಗೆ ಕೊಡುತ್ತಾರೆ.

ನಂಬಿಕೆ ಕಾಯ್ದುಕೊಂಡು ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಸದಸ್ಯರುಗಳಿಗೆ ಕಿವಿಮಾತು ಹೇಳಿದರು ಈ ಕಾರ್ಯಕ್ರಮ ಸದಸ್ಯರುಗಳ ಅಭಿನಂದನ ಕಾರ್ಯಕ್ರಮವಾಗಿತ್ತು ಕಾರ್ಯಕ್ರಮದಲ್ಲಿ   ಕಡಿ ಮಷನ ಗ್ರಾಮಸ್ಥರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸುತ್ತಮುತ್ತಲಿನ ಗ್ರಾಮದ ಹಿರಿಯರು ಉಪಸ್ಥಿತರಿದ್ದರು