ವಿದ್ಯುತ್ ಕಳ್ಳತನ: ಸೆವೇನ ಬಿನ್ಸ್ ಹೊಟೇಲ್ ಮೇಲೆ ಹೆಸ್ಕಾಂ ದಾಳಿ

0

ಬೆಳಗಾವಿ, ಡಿ.04 : ಬೆಳಗಾವಿಯ ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯವರು ಜನೇವರಿ 2, 2021 ರಂದು ನಗರದ ನೆಹರು ನಗರದಲ್ಲಿ ಸೆವೇನ ಬಿನ್ಸ್ ಹೊಟೇಲ್ ಮೇಲೆ ದಾಳಿ ನಡೆ ವಿದ್ಯುತ್ ಕಳ್ಳತನ ಆರೋಪ ಕಂಡುಬಂದಿದ್ದು ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ ಸಂಜ್ಞಾ ಪ್ರಕರಣ ದಾಖಲಾಗಿದೆ.
ಆರೋಪಿತರಿಗೆ ಬಿ.ಬಿ.ಸಿ ಶುಲ್ಕ 1,73,969 ರೂಪಾಯಿ ಮತ್ತು ರಾಜೀ ಶುಲ್ಕ 14,000 ರೂಪಾಯಿ, ಒಟ್ಟು 1,87,969 ರಾಪಾಯಿ ಶುಲ್ಕ ವಿಧಿಸಲಾಗಿದೆ ಎಂದು ಹು.ವಿ.ಸ.ಕಂ.ನಿ ಜಾಗೃತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್.ಪಿ ರವಿಂದ್ರ ಗಡಾದಿ, ಡಿ.ಎಸ್.ಪಿ ವಿಜಯಕುಮಾರ, ವಿ.ತಳವಾರ ಹೆಸ್ಕಾಂ ಜಾಗೃತ ಘಟಕ ಹುಬಬ್ಬ್ಳ್ಳಿ ಅವರ ಮಾರ್ಗದರ್ಶನದಲ್ಲಿ ದಾಳಿ ಕೈಗೊಳ್ಳಲಾಗಿದ್ದು, ದಾಳಿ ಸಮಯದಲ್ಲಿ ಎ.ಇ.ಇ ಆಯ್ ನೀರಲಕಟ್ಟಿ, ಪೊಲೀಸ್ ಇನ್ಸ್‍ಪೆಕ್ಟರ್

ಟಿ.ಟಿ.ನೀಲಗಾರ, ಎ.ಇ ಪಿ.ಎನ್.ಸಂಶಿ ಮತ್ತು ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.