ಅರ್ಜಿ ಆಹ್ವಾನ: ಸಹಕಾರಿ ಸಂಘ-ಸಂಸ್ಥೆಗಳ ಸಿಬ್ಬಂದಿಗಳಿಗೆ ತರಬೇತಿ

0

ಬೆಳಗಾವಿ, ಡಿ.04 : ಕರ್ನಾಟಕ ಇನ್‍ಸ್ಟಿಟ್ಯೂಟ್ ಆಪ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಬೆಳಗಾವಿಯವರ ಅಡಿಯಲ್ಲಿ 6 ತಿಂಗಳ ಅವಧಿಯ ದೂರ ಶಿಕ್ಷಣ (ಡಿ.ಸಿ.ಎಂ) ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿದ ಸಹಕಾರಿ ಸಂಘ-ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದು.
ತರಬೇತಿಯು ಸಂಪರ್ಕ ರಹಿತ(ದೂರ ಶಿಕ್ಷಣ) ವಾಗಿದ್ದು, ಸಹಕಾರಿ ಸಂಘಗಳ ಸಿಬ್ಬಂದಿಗಳು ಪದೋನ್ನತಿ ಹೊಂದಲು ತರಬೇತಿ ಕಡ್ಡಾಯವಾಗಿದೆ. ಸಹಕಾರಿ ಸಂಘ-ಸಂಸ್ಥೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗಳು ಮಾತ್ರ ತರಬೇತಿ ಪಡೆಯಲು ಅರ್ಹರು ಎಂದು ಕೆ.ಐ.ಸಿ.ಎಂ. ಪ್ರಾಂಶುಪಾಲರಾದ ಎನ್.ಎಂ.ಶಿವಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿಯನ್ನು 2021 ಜನವರಿ ತಿಂಗಳಿನಿಂದ ಖುದ್ದಾಗಿ ಅಥವಾ ಆನ್‍ಲೈನ್ www.kscfdcm.co.in ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಕೆ.ಐ.ಸಿ.ಎಂ. ರಾಮತೀರ್ಥನಗರ ಬೆಳಗಾವಿ ದೂರವಾಣಿ ಸಂಖ್ಯೆ: 0831-2950026, ಮೋ: 7259729104, 8884259545, 6360475029, 8050533207 ಸಂಪರ್ಕಿಸಿ.