18 ಜನ ಶಿಕ್ಷಕರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.

0

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 18 ಜನ ಶಿಕ್ಷಕರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.

ಬೆಳಗಾವಿಯ 7 ಸಾವಿರ ಶಿಕ್ಷಕರಿಗೆ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗಿತ್ತು.ಇದರಲ್ಲಿ ಬೆಳಗಾವಿ ನಗರ‌ 4, ಬೆಳಗಾವಿ ಗ್ರಾಮೀಣ 10, ರಾಮದುರ್ಗ-3 ಕಿತ್ತೂರಿನಲ್ಲಿ ತಲಾ ಒಬ್ಬರಿಗೆ ದೃಡಪಟ್ಟಿದೆ.ಇನ್ನೂ ಹಲವು ಶಿಕ್ಷಕರ ಟೆಸ್ಟ್‌ ವರದಿ ಬಾರೋದು ಬಾಕಿಯಿದೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4 ಜನ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.

ಹುಕ್ಕೇರಿ ತಾಲೂಕಿನ ಮೋದಗಾ ಗ್ರಾಮದ ಶಾಲೆಯ ಇಬ್ಬರು ಶಿಕ್ಷಕರು ಹಾಗೂ ರಾಯಬಾಗ ತಾಲೂಕಿನ ಇಬ್ಬರೂ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.

ಇಂದು ಶಾಲೆಗೆ ಬರುವ ಮುನ್ನವೇ ಪಾಸಿಟಿವ್ ರಿಪೋರ್ಟ್ ಹಿನ್ನಲೆ ಕ್ವಾರಂಟೈನಲ್ಲಿ ಶಿಕ್ಷಕರು ಇದ್ದಾರೆ.

15 ಸಾವಿರಕ್ಕೂ ಹೆಚ್ಚು ಶಿಕ್ಷಕರು ಇರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಇದುವರೆಗೂ 10 ಸಾವಿರ ಜನ ಶಿಕ್ಷಕರ ಕೊರೊನಾ ಟೆಸ್ಟಿಂಗ್ ಮಾಡಲಾಗಿದೆ.ಇನ್ನು 5 ಸಾವಿರ ಶಿಕ್ಷಕರ ಕೊರೊನಾ ವರದಿ ಬಾಕಿ ಇದೆ.

ಜನವರಿ ಒಂದರಂದು ರಾಜ್ಯ ಸರಕಾರ ಶಾಲೆಗಳನ್ನು ತೆರೆಯಲು ಸೂಚನೆ ನೀಡಿತ್ತು . ಇದರ ಬೆನ್ನಿಗೆ ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಶಾಲೆ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿವೆ.

ಈ ನಡುವೆ ಶಿಕ್ಷಕರಿಗೆ ಕೊರೋನಾ ಸೋಂಕು ತಗಲಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಕಳವಳವನ್ನುಂಟು ಮಾಡಿದೆ.

ಶಿಕ್ಷಕರ ಒಡನಾಟ ಹೊಂದಿದ್ದ ವಿದ್ಯಾರ್ಥಿಗಳು ಇದೀಗ ಕೊರೋನಾ ಪರೀಕ್ಷೆಗೆ ಒಳಪಡುವಂತೆ ಮಾಡಿರುವುದು ಮಾಡಿದೆ.

ಒಟ್ಟಾರೆ ಇಡೀ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 2,600 ಶಿಕ್ಷಕರನ್ನು ಕೊರೋನಾ ಸೋಂಕು ಪರೀಕ್ಷೆಗೊಳಪಡಿಸಲಾಗಿತ್ತು.

ಇದರಲ್ಲಿ ಸದ್ಯ ಕೆಲ ಶಿಕ್ಷಕರ ಪರೀಕ್ಷಾ ವರದಿ ಮಾತ್ರ ಬಂದಿದ್ದು,  ಇನ್ನುಳಿದ ಶಿಕ್ಷಕರ ಕೊರೋನಾ ಪರೀಕ್ಷಾ ವರದಿ ಬರಬೇಕಾಗಿದೆ.

ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಕರಿಗೆ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಡಿಡಿಪಿಐ ಆನಂದ ಪುಂಡಲೀಕ ತಿಳಿಸಿದ್ದಾರೆ.

ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಕಂಡುಬಂದಿರುವ ಕೊರೋನಾ ಸೋಂಕು ಸೋಕಿನಿಂದ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕೇ ? ಕಳುಹಿಸಬಾರದೇ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ.