ಮೂವರ ಬಂಧನ : 7 ಲಕ್ಷ ಮೌಲ್ಯದ ಚಿನ್ನಾಭರಣ ವಶ

0

ಬೆಳಗಾವಿ : ಖಾನಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳ್ಳತನ ಮಾಡಿದ ಮೂವರು ಖದೀಮರನ್ನು ಖಾನಾಪುರ ಪೊಲೀಸರು  ಬಂಧಿಸಿದ್ದಾರೆ.

ಅಬ್ದುಲಗಣಿ ಶಬ್ಬೀರ್ ಶೇಖ್ (21),  ಜಾವೇದ್ ಇಲಿಯಾಸ್ ಬೆಂಡಿಗೇರಿ (24), ಸಲಿಂ ಮುಕ್ತುಮಸಾಬ ಬಸ್ಸಾಪೂರೆ (31) ಬಂಧಿತರು. ಇವರಿಂದ 133 ಗ್ರಾಂ ಬಂಗಾರ,  40 ಗ್ರಾಂ ಬೆಳ್ಳಿ,ಕಳ್ಳತನ ಮಾಡಲು ಬಳಿಸಿದ್ದ ದ್ವಿಚಕ್ರ ವಾಹನ, ಮೊಬೈಲ್  ಸೇರಿ  ಒಟ್ಟು 7,80,000 ಬೆಲೆಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಪೊಲೀಸ್ ಅಧೀಕ್ಷಕ  ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬೈಲಹೊಂಗಲ ಡಿಎಸ್ ಪಿ ಜೆ.ಎಂ.ಕರುಣಾಕರ ಶೆಟ್ಟಿ , ಖಾನಾಪೂರ ಸಿಪಿಐ ಸುರೇಶ್ ಶಿಂಗಿ, ಕಾನೂನು ಸುವ್ಯವಸ್ಥೆ ಪಿಎಸ್ಐ ಬಸಗೌಡ ಪಾಟೀಲ್ ಮತ್ತು ಪಿಎಸ್ಐ ಎಸ್.ಎಂ.ಕಾರಜೋಳ,  ಪಿಎಸ್ಐ ಬಸಗೌಡ ನೇರ್ಲಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ಆದೇಶದಂತೆ ಕಾರಾಗೃಹಕ್ಕೆ ರವಾನಿಸಲಾಗಿದೆ.