ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ತಮ್ಮ ವಿರುದ್ಧದ ಡಿ ನೋಟಿಫಿಕೇಷನ್ ಪ್ರಕರಣದ ತನಿಖೆಗೆ ಕಲಬುರಗಿ ಹೈಕೋರ್ಟ್ ಗ್ರೀನ್ ಸಿಗ್ನಲ್

0

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ತಮ್ಮ ವಿರುದ್ಧದ ಡಿ ನೋಟಿಫಿಕೇಷನ್ ಪ್ರಕರಣದ ತನಿಖೆಗೆ ಕಲಬುರಗಿ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಗಂಗೇನಹಳ್ಳಿಯಲ್ಲಿ ಬಳಿಯ ಮಠದಹಳ್ಳಿ 1.11ಎಕರೆ ಡಿ ನೋಟಿಫಿಕೇಷನ್ ಕುರಿತಂತೆ 2015ರಲ್ಲಿ ಜಯಕುಮಾರ್ ಹಿರೇಮಠ್ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಹೆಚ್.ಡಿ ಕುಮಾರಸ್ವಾಮಿ ಎರಡನೇ ಆರೋಪಿಯಾಗಿದ್ದಾರೆ.

ಸದ್ಯ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ಮಾಡಿದ್ದ ಅರ್ಜಿಯನ್ನು ಕಲಬುರ್ಗಿ ಸಂಚಾರಿ ಹೈಕೋರ್ಟ್​​​ನ ನ್ಯಾ. ಮೈಕಲ್ ಡಿ‌ ಕುನ್ಹಾ ಅವರು ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದ್ದು, ವಜಾ ಮಾಡಿ ತನಿಖೆಗೆ ಆದೇಶ ನೀಡಿದ್ದಾರೆ. ಅಲ್ಲದೇ ಪ್ರಕರಣದ ರದ್ದು ಕೋರಿ ಅರ್ಜಿ ಸಲ್ಲಿಕೆ ಮಾಡಿದ ಹಿನ್ನೆಲೆ ಕೋರ್ಟ್​ ಯಡಿಯೂರಪ್ಪ ಅವರಿಗೆ 25 ಸಾವಿರ ರೂಪಾಯಿಗಳನ್ನು ದಂಡ ವಿಧಿಸಿದೆ.