ಕೊಚ್ಚಿನ್ ನಿಂದ ಮಂಗಳೂರಿಗೆ ಸಿಎನ್ ಜಿ ಸರಬರಾಜು ಮಾಡುವ ಗ್ಯಾಸ್ ಪೈಪ್ ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು.

0

ಹೊಸದಿಲ್ಲಿ : ಕೊಚ್ಚಿನ್ ನಿಂದ ಮಂಗಳೂರಿಗೆ ಸಿಎನ್ ಜಿ ಸರಬರಾಜು ಮಾಡುವ ಗ್ಯಾಸ್ ಪೈಪ್ ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು.

ಇದೇ ವೇಳೆ ಮಾತನಾಡಿದ ಅವರು, 450 ಕಿ.ಮೀ ಉದ್ದದ ಪೈಪ್ ಲೈನ್ ಅನ್ನು ಲೋಕಾರ್ಪಣೆ ಮಾಡಿದ್ದು ಗೌರವ ಆಗಿದೆ. ವಿಶೇವಾಗಿ ಕರ್ನಾಟಕ ಮತ್ತು ಕೇರಳ ಜನರಿಗೆ ಮಹತ್ವದ ದಿನವಾಗಿದೆ ಎಂದರು.

ನವೆಂಬರ್​ನಲ್ಲೇ ಈ ಕಾಮಗಾರಿ ಪೂರ್ಣವಾಗಿತ್ತು. ಪೈಪ್‌ಲೈನ್​​​​​ ಅನ್ನು ಗೇಲ್ (ಇಂಡಿಯಾ) ಲಿಮಿಟೆಡ್ ನಿರ್ಮಿಸಿದೆ. ಇದು ದಿನಕ್ಕೆ 12 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಘನ ಮೀಟರ್ ಅನಿಲವನ್ನು ಸಾಗಣೆ ಸಾಮರ್ಥ್ಯವನ್ನು ಹೊಂದಿದ್ದು, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಜಿಕೋಡ್​, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಮೂಲಕ ಪೈಪ್​​ಲೈನ್​​ಹಾದುಹೋಗಿದೆ. ಯೋಜನೆಗೆ ಸುಮಾರು 3,000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳ

ಪ್ರಧಾನಿಯವರೊಂದಿಗೆ ಕರ್ನಾಟಕ ಮತ್ತು ಕೇರಳ ಇಬ್ಬರು ಗವರ್ನರ್​​ಗಳು, ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಸಿಎಂ ಬಿಎಸ್​ ಯಡಿಯೂರಪ್ಪ, ಕೇರಳ ಸಿಎಂ ಪಿಣರಾಯಿ ವಿಜಯನ್, ಉಪಸ್ಥಿತರಿದ್ದರು.