ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 22 ಜನ ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿದ್ದು, ಪೋಷಕರಲ್ಲಿ ಆತಂಕ

0

ಬೆಳಗಾವಿ :  ಸರ್ಕಾರ ಶಾಲೆ, ಕಾಲೇಜುಗಳನ್ನು ಆರಂಭವಾಗಿರುವ ಬೆನ್ನಲ್ಲೆ  ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 22 ಜನ ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿದ್ದು, ಪೋಷಕರಲ್ಲಿ ಆತಂಕ ಮತ್ತೆ ಮನೆ ಮಾಡಿದೆ.

ಕೋವಿಡ್ ಸೋಂಕು ಕಡಿಮೆಯಾಗಿ ಸ್ವಲ್ಪ ಮಟ್ಟಿಗೆ ಎಲ್ಲವೂ ಸಹಜ ಸ್ಥಿತಿಯತ್ತ ಬರುತ್ತಿವೆ. ಜನವರಿ 1 ರಿಂದ ಸರ್ಕಾರ ಶಾಲೆ, ಕಾಲೇಜು ಆರಂಭಕ್ಕೆ ಗ್ರಿನ್ ಸಿಗ್ನಲ್ ನೀಡಿದೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಶಿಕ್ಷಕರಿಗೆ ಸೋಂಕು ತಲುಲಿದೆ.

ಬೆಳಗಾವಿ ಗ್ರಾಮೀಣ ಭಾಗದ 10, ಬೆಳಗಾವಿ ನಗರ ವಲಯದ 4 , ರಾಮದುರ್ಗ 3, ಕಿತ್ತೂರು 1,, ರಾಯಬಾಗದ 2 ,  ಹುಕ್ಕೇರಿಯ 2 ಸೇರಿ ಒಟ್ಟು 22 ಶಿಕ್ಷಕರಿಗೆ ಸೊಂಕು ತಗಲಿರುವುದು ದೃಢ ಪಟ್ಟಿದೆ.

ಸೋಂಕು ತಗಲಿದ ಶಿಕ್ಷಕರು ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿಲ್ಲ. ಇವರೆಲ್ಲರನ್ನೂ ಕ್ವಾರಂಟೈನ್  ಇಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಪಾಲಕರು ಆತಂಕ ಪಡೆಯುವ ಅಗತ್ಯವಿಲ್ಲ ಎಂದು ಚಿಕ್ಕೋಡಿ,ಬೆಳಗಾವಿ ಡಿಡಿಪಿಐ ಗಳು ತಿಳಿಸಿದ್ದಾರೆ.